ಕನ್ನಡಿಗರಿಗೆ ಇರಲಿ ಆದ್ಯತೆ

Kannada 12 Feb 20
Published on

ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯ ಭಾಗವಾಗಿ ಕಿನ್ನಾಳ ಕಲೆ, ಆಟಿಕೆ ಖ್ಯಾತಿಯ ಕೊಪ್ಪಳದಲ್ಲಿ ದೇಶದ ಮೊಟ್ಟಮೊದಲ ಆಟಿಕೆ ಕ್ಲಸ್ಟರ್ (ತಯಾರಿಕಾ ಸಮೂಹ) ಸ್ಥಾಪನೆ ಆಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

400 ಎಕರೆ ಪ್ರದೇಶದಲ್ಲಿ, -ಠಿ; 5 ಸಾವಿರ ಕೋಟಿ ಹೂಡಿಕೆಯೊಡನೆ ಆರಂಭವಾಗಲಿರುವ ‘ಆಟಿಕೆ ತಯಾರಿಕಾ ಸಮೂಹ’ದಿಂದ 40 ಸಾವಿರಕ್ಕೂ ಹೆಚ್ಚು ಕರಕುಶಲಕರ್ವಿುಗಳಿಗೆ ನೇರವಾಗಿ ಮತ್ತು 1 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಇದು ಕನ್ನಡಿಗರಿಗೆ ಸಂತಸದ ಸಂಗತಿ. ಆದರೆ, ಹಿಂದಿನ ಘಟನೆಗಳನ್ನು ಗಮನಿಸಿದರೆ, ರಾಜ್ಯದಲ್ಲಿ ಇಂಥ ಹೊಸ ಅವಕಾಶಗಳು ಬಂದಾಗಲೆಲ್ಲ ಅವು ಪರಪ್ರಾಂತ್ಯದವರ ಪಾಲಾಗಿವೆ. ಈ ಯೋಜನೆಯಲ್ಲಿ ಕನ್ನಡಗರಿಗೆ ಕನಿಷ್ಠ ಶೇಕಡ 70ರಷ್ಟು ಪಾಲು ಅಂದರೆ, ಉದ್ಯೋಗ ಮತ್ತು ಉದ್ಯಮಿಗಳಿಗೆ ಆದ್ಯತೆ ದೊರೆಯುವಂತೆ ಕರ್ನಾಟಕ ಸರ್ಕಾರ ನಿಯಮ ರೂಪಿಸಬೇಕು.

| ರಾ.ನಂ.ಚಂದ್ರಶೇಖರ ಸಂಚಾಲಕ, ಕನ್ನಡ ಗೆಳೆಯರ ಬಳಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net