

ಮುಂಜಾಗ್ರತಾ ಕ್ರಮ, ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ತಬ್ಲಿಘಿ ಜಮಾತ್ ಸಂಘಟನೆಯ ಸುಮಾರು 150 ಸದಸ್ಯರ ವಿರುದ್ಧ ಮುಂಬೈನ ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಯಾಣ ಮಾಹಿತಿ ಮುಚ್ಚಿಟ್ಟು ಕ್ವಾರಂಟೈನ್ಗೆ ಒಳಗಾಗದೇ ತಪ್ಪಿಸಿಕೊಂಡಿದ್ದ ತಬ್ಲಿಘಿ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 271 ಹಾಗೂ 188ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ರೀತಿ ದೆಹಲಿಯಲ್ಲಿ ಅನುಚಿತ ವರ್ತನೆ ತೋರಿದ ತಬ್ಲಿಘಿ ಸದಸ್ಯರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.
ನಿಜಾಮುದ್ದೀನ್ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ತಬ್ಲಿಘಿ ಜಮಾತ್ ಸದಸ್ಯರನ್ನು ಕ್ವಾರಂಟೈನ್ ಮತ್ತು ತಪಾಸಣೆಗಾಗಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಕರೆತಂದಾಗ ಅವರು ಅನುಚಿತ ವರ್ತನೆ ತೋರಿಸಿದ್ದು, ಕ್ವಾರಂಟೈನ್ ಕೊಠಡಿ ಎದುರೇ ಮಲ, ಮೂತ್ರ ವಿಸರ್ಜನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.