ಭಾರತೀಯ ಸೈನಿಕರ ಸುರಕ್ಷತೆಗೆ ಪ್ರಾರ್ಥನೆ

Indian soldiers
ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಬಿಜೆಪಿ ಶಿವಮೊಗ್ಗ ನಗರ ಘಟಕದ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು. ಎಸ್.ಎನ್.ಚನ್ನಬಸಪ್ಪ, ಎನ್.ಕೆ.ಜಗದೀಶ್, ಮೋಹನ್ ರೆಡ್ಡಿ, ಎಸ್.ಜ್ಞಾನೇಶ್ವರ್, ಎಸ್.ಶಿವಕುಮಾರ್, ವಿಶ್ವನಾಥ, ಸುರೇಖಾ ಮುರಳೀಧರ್, ಅನಿತಾ ರವಿಶಂಕರ್ ಇದ್ದರು.
Published on

ಶಿವಮೊಗ್ಗ: ಪಾಕಿಸ್ತಾನದಲ್ಲಿನ ಭಯೋತ್ಪಾದಕರ ವಿರುದ್ಧ ಸಿಡಿದೆದಿದ್ದರುವ ಭಾರತೀಯ ಸೇನಾ ಪಡೆ(ಮೂರೂ ಸೇನೆ)ಗಳ ಸುರಕ್ಷತೆಗಾಗಿ ಜಿಲ್ಲೆಯ ಹಲವೆಡೆ ವಿಶೇಷ ಪೂಜೆ-ಪುನಸ್ಕಾರಗಳು ಶುಕ್ರವಾರ ಸಾಂಘವಾಗಿ ನೆರವೇರಿದವು. ಮತ್ತೊಂದೆಡೆ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಬೆಂಬಲಿಸಿ ಭಾರತ ಸಿಂಧೂರ ನಡೆ, ಮಸೀದಿಗಳಲ್ಲಿ ಪ್ರಾರ್ಥನೆ ನಡೆಸಲಾಯಿತು.

ಕಾಶ್ಮೀರ ಕಣಿವೆ ಪಹಲ್ಗಾಮ್‌ನಲ್ಲಿ ಉಗ್ರರ ಹೇಡಿ ಕೃತ್ಯಕ್ಕೆ ಪ್ರತೀಕಾರವಾಗಿ ಸತತ ಮೂರು ದಿನಗಳಿಂದ ನಡೆಯುತ್ತಿರುವ ಆಪರೇಷನ್ ಸಿಂಧೂರ ಯಶಸ್ಸಿಗೆ ಹಾಗೂ ಭಯೋತ್ಪಾದಕರನ್ನು ಹೊಡೆದುರುಳಿಸಿ ಪಾಕಿಸ್ತಾನವನ್ನು ನಿದ್ದೆಗೆಡಿಸುತ್ತಿರುವ ನಮ್ಮ ಹೆಮ್ಮೆಯ ಪಡೆಗಳ ಸುರಕ್ಷತೆಗಾಗಿ ಬಿಜೆಪಿ ಶಿವಮೊಗ್ಗ ನಗರ ಘಟಕದ ಪದಾಧಿಕಾರಿಗಳು ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಎಸ್.ಜ್ಞಾನೇಶ್ವರ್, ಎಸ್.ಶಿವಕುಮಾರ್, ವಿಶ್ವನಾಥ, ಸುರೇಖಾ ಮುರಳೀಧರ್, ಅನಿತಾ ರವಿಶಂಕರ್, ಜಿಲ್ಲಾ ಹಾಗೂ ನಗರದ ಪ್ರಮುಖರು, ಮೋರ್ಚಾ ಪದಾಧಿಕಾರಿಗಳು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ: ಆಪರೇಷನ್ ಸಿಂಧೂರ ಬೆಂಬಲಿಸಿ ಮತ್ತು ಪಾಕಿಸ್ಥಾನ ವಿರುದ್ಧ ಹೋರಾಡುತ್ತರುವ ಭಾರತೀಯ ಸೇನೆಯ ಶಕ್ತಿ ಹೆಚ್ಚಿಸಲು ಹೊಳೆಹೊನ್ನೂರು ರಸ್ತೆಯ ಪಿಳ್ಳಂಗಿರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಹನುಮಂತ ದೇವರಿಗೆ ಭಾರತೀಯ ಸೇನೆ ಹೆಸರಿನಲ್ಲಿ ಸಂಕಲ್ಪ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜಾ ಕೈಂಕರ್ಯಗಳ ನಂತರ ಮಾಜಿ ಸೈನಿಕರಿಗೆ ಸನ್ಮಾನ ಮಾಡಿ ಭಾರತೀಯ ಸೇನೆ ಹಾಗೂ ಭಾರತಾಂಬೆಗೆ ಜೈಕಾರ ಹಾಕಿ ಆಪರೇಷನ್ ಸಿಂಧೂರ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಮಾಜಿ ಸೈನಿಕರಾದ ಉಮೇಶ್ ಬಾಪಟ್, ಶ್ರೀನಾಥ್, ಮಹಾಬಲೇಶ್, ದೀನದಯಾಳು, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್ಕುಮಾರ್, ದೇವಸ್ಥಾನದ ಅರ್ಚಕ ಮಿಥುನ್ ಅಯ್ಯಂಗಾರ್ ಮತ್ತು ಪಿಳ್ಳನಗಿರಿ ಗ್ರಾಮದ ಮುಖಂಡರು ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net