

ಪ್ರಯಾಗ್‌ರಾಜ್: ಉತ್ತರ ಪ್ರದೇಶದಲ್ಲಿ ಲೋಕಸೇವಾ ಆಯೋಗದ ಪರಿಶೀಲನಾ ಅಧಿಕಾರಿ/ಸಹಾಯಕ ಪರಿಶೀಲನಾ ಅಧಿಕಾರಿಯ ನೇಮಕಾತಿ ಪರೀಕ್ಷಾ ಪತ್ರಿಕೆ ಸೋರಿಕೆ(RO/ARO Paper Leak Case) ಪ್ರಕರಣದಲ್ಲಿ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯ ಮಾಜಿ ಪ್ರಾಂಶುಪಾಲರಾದ ಪಾರುಲ್ ಸೊಲೊಮನ್ ಅವರನ್ನು ಬಂಧಿಸಲಾಗಿದೆ.
2024ರ ಫೆಬ್ರವರಿ 11 ರಂದು, ಉತ್ತರ ಪ್ರದೇಶದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಪೇಪರ್ ಸೋರಿಕೆಯಿಂದಾಗಿ ಯುಪಿ ಲೋಕಸೇವಾ ಆಯೋಗವು ಪರೀಕ್ಷೆಯನ್ನು ರದ್ದುಗೊಳಿಸಿ, ಪ್ರಯಾಗ್‌ರಾಜ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿತ್ತು.
ಇದಾದ ಬಳಿಕ ಯೋಗಿ ಅವರ ಸರ್ಕಾರವು ಪ್ರಕರಣದ ತನಿಖೆಯನ್ನು ಎಸ್‌ಟಿಎಫ್‌ಗೆ ಹಸ್ತಾಂತರಿಸಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್ ಲೀಡರ್ ಸೇರಿದಂತೆ ಹತ್ತು ಮಂದಿಯನ್ನು ಎಸ್‌ಟಿಎಫ್ ಬಂಧಿಸಿತ್ತು.
ಪರೀಕ್ಷೆ ಸಂದರ್ಭದಲ್ಲಿ ಪಾರುಲ್ ಸೊಲೊಮನ್ ಪ್ರಯಾಗರಾಜ್‌ನ ಬಿಷಪ್ ಜಾನ್ಸನ್ ಗರ್ಲ್ಸ್ ಸ್ಕೂಲ್‌ನ ಪ್ರಾಂಶುಪಾಲರಾಗಿದ್ದು, ಈ ಶಾಲೆಯಲ್ಲಿ ಪರೀಕ್ಷೆ ಉಸ್ತುವಾರಿ ಅರ್ಪಿತ್ ವಿನೀತ್ ಪೇಪರ್ ಸೋರಿಕೆಯಲ್ಲಿ ಬಂಧಿತನಾಗಿದ್ದು, ಇವರ ಸಹಕಾರದಿಂದ ಪತ್ರಿಕೆ ಸೋರಿಕೆಯಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟಿದ್ದರಿಂದ ಆಕೆಯನ್ನು ಬಂಧಿಸಿದೆ.