INDW vs IREW ODI: ಭಾರತ ಮಹಿಳೆಯರ ಶುಭಾರಂಭ: ಏಕದಿನ ಕ್ರಿಕೆಟ್‌ನಲ್ಲಿ ಸ್ಮತಿ ಮಂದನಾ ವಿಶೇಷ ಸಾಧನೆ

New Project (1)
Published on

ರಾಜ್‌ಕೋಟ್: ಯುವ ಬ್ಯಾಟುಗಾರ್ತಿ ಪ್ರತೀಕಾ ರಾವಲ್ (89 ರನ್, 96 ಎಸೆತ, 10 ಬೌಂಡರಿ, 1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ, ಐರ್ಲೆಂಡ್ ವಿರುದ್ಧದ ಮಹಿಳೆಯರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. 2025ರಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಶುಭಾರಂಭ ಕಂಡಿರುವ ಸ್ಮತಿ ಮಂದನಾ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.

ನಿರಂಜನ್ ಷಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ನಾಯಕಿ ಗೇಬಿ ಲೆವಿಸ್ (92 ರನ್, 129 ಎಸೆತ, 15 ಬೌಂಡರಿ) ಹಾಗೂ ಲೇಹ್ ಪೌಲ್ (59 ರನ್, 73 ಎಸೆತ, 7 ಬೌಂಡರಿ) ಜತೆಯಾಟದ ಬಲದಿಂದ 7 ವಿಕೆಟ್‌ಗೆ 238 ರನ್ ಕಲೆಹಾಕಿತು. ಪ್ರತಿಯಾಗಿ ಸ್ಮತಿ ಮಂದನಾ (41) ಒದಗಿಸಿದ ಬಿರುಸಿನ ಆರಂಭ ಹಾಗೂ ಪ್ರತೀಕಾ ರಾವಲ್-ತೇಜಲ್ ಹಸಬೀನ್ಸ್ (53* ರನ್, 46 ಎಸೆತ, 9 ಬೌಂಡರಿ) ಜತೆಯಾಟದ ನೆರವಿನಿಂದ ಭಾರತ 34.1 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು. ಭಾರತದ ಪರ ವೇಗಿ ಸಯಾಲಿ ಸತ್ಗರೆ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದರು.

ಐರ್ಲೆಂಡ್: 7 ವಿಕೆಟ್‌ಗೆ 238 (ಸಾರಾ 9, ಗೇಬಿ ಲೆವಿಸ್ 62, ಲಿಹಾ ಪೌಲ್ 59, ಕ್ರಿಸ್ಟಿನಾ 15*, ಅರ್ಲಿನೆ 28, ಪ್ರಿಯಾ ಮಿಶ್ರಾ 56ಕ್ಕೆ 2, ದೀಪ್ತಿ 41ಕ್ಕೆ 1). ಭಾರತ: 34.3 ಓವರ್‌ಗಳಲ್ಲಿ 4 ವಿಕೆಟ್‌ಗೆ 241 (ಸ್ಮತಿ ಮಂದನಾ 41, ಪ್ರತೀಕಾ 89, ಹರ್ಲೀನ್ 20, ಜೆಮೀಮಾ 9, ತೇಜಲ್ 59*, ರಿಚಾ 8*, ಆಮಿ ಮಗುರೆ 57ಕ್ಕೆ 3).

ಪಂದ್ಯಶ್ರೇಷ್ಠ: ಪ್ರತೀಕಾ ರಾವಲ್

ಎರಡನೇ ಏಕದಿನ

ಯಾವಾಗ: ಭಾನುವಾರ

ಆರಂಭ: ಬೆಳಗ್ಗೆ 11

ನೇರಪ್ರಸಾರ: ಸ್ಪೋರ್ಟ್ಸ್18, ಹಾಟ್‌ಸ್ಟಾರ್.

3. ಸ್ಮತಿ ಮಂದನಾ (95 ಇನಿಂಗ್ಸ್) ಏಕದಿನ ಕ್ರಿಕೆಟ್‌ನಲ್ಲಿ 3ನೇ ವೇಗವಾಗಿ 4 ಸಾವಿರ ರನ್ ಗಳಿಸಿದ ಸಾಧಕಿ ಮತ್ತು ಈ ಸಾಧನೆ ಮಾಡಿದ 2ನೇ ಭಾರತೀಯ ಬ್ಯಾಟುಗಾರ್ತಿ ಎನಿಸಿದರು. ಮಿಥಾಲಿ ರಾಜ್ (112) ಮೊದಲಿಗರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net