ಮಂಗಳಮುಖಿಯರಿಗೆ ಪ್ರತಿಜ್ಞಾವಿಧಿ ಬೋಧನೆ

Pratijnavidhi teaching for Martians
ಮುದ್ದೇಬಿಹಾಳ ತಾ.ಪಂ. ಕಚೇರಿ ಆವರಣದಲ್ಲಿ ಮಂಗಳಮುಖಿಯರಿಗೆ ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಖೂಬಾಸಿಂಗ್​ ಜಾಧವ, ಪಿ.ಎಸ್​. ಕಸನಕ್ಕಿ, ಧೂಳಪ್ಪ ಅಂಜುಟಗಿ, ವೀರೇಶ ಹೂಗಾರ, ಪರಮೇಶ ಹೊಸಮನಿ ಇದ್ದರು.
Published on

ಮುದ್ದೇಬಿಹಾಳ : ಇಲ್ಲಿನ ಬಸ್​ ನಿಲ್ದಾಣ ಎದುರಿಗೆ ಇರುವ ತಾ.ಪಂ. ಕಚೇರಿ ಆವರಣದಲ್ಲಿ ತಾಲೂಕು ಸ್ವೀಪ್​ ಸಮಿತಿ ವತಿಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಮಂಗಳಮುಖಿಯರಿಗೆ ಕಡ್ಡಾಯ ಮತದಾನದ ಕುರಿತು ಗುರುವಾರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಲಾಯಿತು.

ತಾ.ಪಂ. ಯೋಜನಾಧಿಕಾರಿ ಖೂಬಾಸಿಂಗ್​ ಜಾಧವ ಮಾತನಾಡಿದರು. ನರೇಗಾ ಯೋಜನೆ ಸಹಾಯಕ ನಿರ್ದೇಶಕ ಪಿ.ಎಸ್​. ಕಸನಕ್ಕಿ ಪ್ರತಿಜ್ಞಾ ವಿಧಿ ಬೋಧಿಸಿದರು.

ತಾಪಂ ಕಚೇರಿ ವ್ಯವಸ್ಥಾಪಕ ಧೂಳಪ್ಪ ಅಂಜುಟಗಿ, ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ವೀರೇಶ ಹೂಗಾರ, ಐಇಸಿ ಸಂಯೋಜಕ ಪರಮೇಶ ಹೊಸಮನಿ, ಎನ್​ಆರ್​ಎಲ್​ಎಂ ತಾಲೂಕು ವ್ಯವಸ್ಥಾಪಕ ಮಂಜುನಾಥ ಹಿರೇಮಠ, ತಾ.ಪಂ. ಕಚೇರಿಯ ಚುನಾವಣೆ ವಿಷಯ ನಿರ್ವಾಹಕ ಎಸ್​.ಎಸ್​. ಬಂಗಾರಗುಂಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net