

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲೇ ಮುಂದುವರಿದೆ. ಅವರು ದೆಹಲಿ ಆರ್ಮಿ ಹಾಸ್ಪಿಟಲ್ನಲ್ಲಿ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ.
ತಜ್ಞ ವೈದ್ಯರ ತಂಡ ಪ್ರಣಬ್ ಮುಖರ್ಜಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರಿನ್ನೂ ವೆಂಟಿಲೇಟರ್ ಸಹಾಯದಲ್ಲೇ ಇದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪ್ರಣಬ್ ಮುಖರ್ಜಿ ಅವರು ಕೊವಿಡ್-19 ಸೋಂಕಿತರಾಗಿದ್ದರು. ಅದರೊಂದಿಗೆ ಮಿದುಳು ಸರ್ಜರಿ ಮಾಡಲಾಗಿತ್ತು. ಮಿದುಳುನ ಶಸ್ತ್ರಕ್ರಿಯೆ ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. (ಏಜೆನ್ಸೀಸ್)