ಆದೇಶ ಉಲ್ಲಂಘನೆ ಪ್ರಮೋದ್ ಮುತಾಲಿಕ್ ವಶಕ್ಕೆ

IMG_20220729_121416
Published on

ಮಂಗಳೂರು: ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ಶುಕ್ರವಾರ ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದಾಗ ಹೆಜಮಾಡಿ ಬಳಿ ಪೊಲೀಸರು ವಶಕ್ಕೆ ಪಡೆದು ಹಿಂದಕ್ಕೆ ಕಳುಹಿಸಿದ್ದಾರೆ.

ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ತೆರಳಲು ಪ್ರಮೋದ್ ಮುತಾಲಿಕ್ ಬರುತ್ತಿದ್ದರು. ಆದರೆ ಅದಕ್ಕೂ ಮೊದಲೇ ಜಿಲ್ಲೆಯ ಪ್ರವೇಶ ತಡೆದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹೀಗಾಗಿ ಮುತಾಲಿಕ್ ಹೆಜಮಾಡಿ ಮೂಲಕ ಬರುತ್ತಿರುವ ಮಾಹಿತಿ ಪಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net