ಸಿದ್ದರಾಮಯ್ಯ ಲುಂಗಿ ಲೀಡರ್​ ಅನ್ನೋದನ್ನ ಕಾಂಗ್ರೆಸ್​ ಮರೆಯಬಾರದು: ಪ್ರಲ್ಹಾದ್​ ಜೋಶಿ

Joshi Siddaramaiah
Published on

ಧಾರವಾಡ: ಪಂಚೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೆಯಬಾರದೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಜೋಶಿ, ಕಾಂಗ್ರೆಸ್ ಪಕ್ಷದ ಲೋ ಲೆವೆಲ್ ಲಾಂಗ್ವೇಜ್ ಇದು. ಆದರೆ, ನಾನು ಭಾರತ ಸರ್ಕಾರದ ಮಂತ್ರಿಯಾಗಿ ಆ ಲೆವೆಲ್​ಗೆ ಇಳಿದು ಮಾತಾಡಲ್ಲ. ಸಿದ್ದರಾಮಯ್ಯನವರೂ ಸಹ ಲುಂಗಿ ಲೀಡರ್ ಅನ್ನೋದನ್ನ ಕಾಂಗ್ರೆಸ್ ಪಕ್ಷ ಮರೆಯಬಾರದು. ನಾವೂ ಸಹ ಅದೇ ಭಾಷೆಯಲ್ಲಿ ಉತ್ತರ ಕೊಡಬಹುದು. ಆದರೆ ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಬಳಸಿರುವ ಪಂಚೆ ಭಾಷೆಗೆ ನನ್ನ ಬಳಿ ಉತ್ತರ ಇಲ್ಲ ಅಂತೇನಿಲ್ಲ, ನನ್ನ ಬಾಯಲ್ಲಿ ಉತ್ತರ ಇದೆ, ಆದರೆ ಆ ರೀತಿಯ ಅಸಭ್ಯ ಭಾಷೆ ಬಳಸೋದು ಯಾವ ಕಾಲಕ್ಕೂ ಸರಿ ಅಲ್ಲ. ನೇರವಾಗಿ ರಾಜಕಾರಣದಲ್ಲಿ ಡೇ ಟು ಡೇ ಬೇಸಿಸ್​ನಲ್ಲಿ ಸಂಬಂಧವಿಟ್ಟುಕೊಳ್ಳದ, ಸಂಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ರೀತಿಯ ಭಾಷೆ ಬಳಸಿದ ಕಾಂಗ್ರೆಸ್ ಪಕ್ಷಕ್ಕೆ ಜನರೇ ಉತ್ತರ ಕೊಡ್ತಾರೆ. ಕಾಂಗ್ರೆಸ್ ಪಕ್ಷ ಇದನ್ನು ಇಲ್ಲಿಗೇ ನಿಲ್ಲಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net