'ಇದು ನಾಚಿಕೆಯಿಲ್ಲದ ರಾಜಕಾರಣ': ತೆಲಂಗಾಣ ಸಚಿವೆ ಹೇಳಿಕೆಗೆ ನಟ ಪ್ರಕಾಶ್ ರಾಜ್ ತೀಕ್ಷ್ಣ ಪ್ರತಿಕ್ರಿಯೆ | Prakash Raj

Prakash Raj
ಪ್ರಕಾಶ್​ ರಾಜ್​
Published on

ಹೈದರಾಬಾದ್​: ತೆಲಂಗಾಣ ರಾಜ್ಯ ಸಚಿವೆ ಕೊಂಡಾ ಸುರೇಖಾ ಕಾಮೆಂಟ್‌ಗಳಿಗೆ ನಟ ಪ್ರಕಾಶ್ ರಾಜ್(Prakash Raj) ಪ್ರತಿಕ್ರಿಯಿಸಿದ್ದಾರೆ. ತೆಲಂಗಾಣದ ಮಾಜಿ ಐಟಿ ಸಚಿವ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ಅವರನ್ನು ಗುರಿಯಾಗಿಸಿಕೊಂಡು ನಾಯಕಿಯರಾದ ಸಮಂತಾ ಮತ್ತು ರಾಕುಲ್ ಪ್ರೀತ್ ಸಿಂಗ್ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ತಿರುಪತಿ ಲಡ್ಡು ವಿವಾದದಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಕಾಶ್(Prakash Raj )​ ರಾಜ್​, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಇತ್ತೀಚಿನ ಟ್ವೀಟ್ ಮೂಲಕ ಮತ್ತೊಮ್ಮೆ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಪ್ರಕಾಶ್ ರಾಜ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಸಮಕಾಲೀನ ರಾಜಕೀಯದ ಬಗ್ಗೆ ಬಿಸಿ ಬಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಟಿಆರ್ ಬಗ್ಗೆ ಕೊಂಡಾ ಸುರೇಖಾ ಇತ್ತೀಚೆಗೆ ಮಾಡಿದ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಸಚಿವೆ ಸ್ಪಂದಿಸಿರುವುದು ಸರಿಯಲ್ಲ ಎಂದು ‘ಎಕ್ಸ್’ ಖಾತೆ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಚಿಕೆಗೇಡು: Prakash Raj

'ಇದು ನಾಚಿಕೆಗೇಡಿನ ರಾಜಕಾರಣ, ಸಿನಿಮಾದಲ್ಲಿ ನಟಿಸುವ ಹೆಂಗಸರು ಸಣ್ಣವರಾ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದಲ್ಲಿರುವ ಮಹಿಳೆಯೊಬ್ಬರು ಇಬ್ಬರು ಹೆಣ್ಣು ಮಕ್ಕಳ ವಿಚಾರದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೊಳಕು ರಾಜಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೆಲವರು ಪ್ರಕಾಶ್ ರಾಜ್ ಅವರನ್ನು ಬೆಂಬಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net