ಪ್ರಜ್ವಲ ಕಾಂಗ್ರೆಸ್-ಜೆಡಿಎಸ್‌ನಿಂದ ಗೆದ್ದಿರುವ ಸಂಸದ: ಆರ್. ಅಶೋಕ

r-ashok3-1677981269
Published on

ಬ್ಯಾಡಗಿ: ಪ್ರಜ್ವಲ ರೇವಣ್ಣ ಬಿಜೆಪಿ ಮತ್ತು ಜೆಡಿಎಸ್‌ನಿಂದ ಸಂಸದರಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಆಗಿದ್ದಾರೆ. ಆವಾಗ ಕಾಂಗ್ರೆಸ್‌ನವರು ಪ್ರಜ್ವಲ ಪರ ಪ್ರಚಾರ ಮಾಡಿದ್ದಾರೆ. ಈಗ ಅವರು ಗೆದ್ದ ಆದ ಮೇಲೆ ನಮ್ಮ ಪಾರ್ಟಿ ಸೇರಿಸಿಕೊಳ್ಳಬೇಕೋ, ಬೇಡವೋ ಎಂಬ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಕಾಗಿನೆಲೆಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೇನ್‌ಡ್ರೈವ್ ಹೇಗೆ ಹೊರಗೆ ಬಂತು ಅನ್ನೋದು ತನಿಖೆ ನಡೆಯಲಿದೆ. ಹಳ್ಳಿ ಹಳ್ಳಿಗಳಲ್ಲಿ ಲಕ್ಷಾಂತರ ಜನರಿಗೆ ಹಂಚಿದ್ದಾರೆ. ಅದು ತನಿಖೆ ನಡೆಯಲಿ. ಹೀಗೆ ಕಾಂಗ್ರೆಸ್‌ನವರು ಮತ್ತು ಪೊಲೀಸರು ಮುಖ ಪ್ರೇಕ್ಷಕರಾಗಿ ನೋಡುತ್ತಲಿರಲಿ ಎಂದರು.
ಚುನಾವಣೆಯ ವಿಷಯಕ್ಕೆ ಈ ಪ್ರಕರಣ ಬಳಕೆ ಮಾಡಿಕೊಂಡಿದ್ದಾರೆ. ಏನಾಗಲೇ ತಪ್ಪು ತಪ್ಪೇ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಕುಮಾರಸ್ವಾಮಿಯವರು ಪಕ್ಷದಿಂದ ಅವರನ್ನು ಹೊರ ಹಾಕಿದ್ದು ಸ್ವಾಗತ ಮಾಡುತ್ತೇನೆೆ.
ಕಾಂಗ್ರೆಸ್‌ನವರು ಬಹಳಷ್ಟು ಎಕ್ಸ್‌ರ್ಫ ಇದ್ದಾರೆ. ಘಟನೆ ನಡೆದಾಗ ಕಂಪ್ಲೀಟ್ ಆಗಿತ್ತಾ..? ಇಲ್ಲ. ಎಫ್‌ಐಆರ್ ಆಗಿತ್ತಾ..? ಆಗ ಕಾಂಗ್ರೆಸ್‌ನವರು ಮತ್ತು ಪೊಲೀಸರು ಕೇಂದ್ರ ಪತ್ರ ಬರೆದಿದ್ದಾರಾ? ಎಂದು ಪ್ರಶ್ನಿಸಿದರು.
ಕರ್ನಾಟಕದ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆಯಿದೆ. ಪೊಲೀಸರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ. ಪ್ರಜ್ವಲಗೆ ಟಿಕೆಟ್ ನೀಡಬಾರದು ಅಂತಾ ಯಾವುದೇ ಪತ್ರ ನಮಗೆ ಬಂದಿಲ್ಲ ಎಂದರು.
ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಂತ್ರಸ್ತರಿದ್ದವರು ಮುಕ್ತವಾಗಿ ಕಂಪ್ಲೀಟ್ ಕೂಡಲು ತಿಳಿಸಿದ್ದಾರೆ. ಈ ಘಟನೆ ಏಲ್ಲಿ ನಡೆಯಿತು.? ಯಾವಾಗ ನಡೆಯಿತು ಎಂಬ ಬಗ್ಗೆ ನೊಂದ ತಾಯಿಂದರಿಂದ ಮಾಹಿತಿ ಪಡೆದು ಪೊಲೀಸರು ತನಿಖೆ ನಡೆಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net