ಡ್ರೈವರ್‌ನನ್ನು ಮಲೇಶೀಯಾಕ್ಕೆ ಕಳುಹಿಸಿದ್ದು ಯಾರು? ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

dkk
Published on

ಬೆಂಗಳೂರು:
ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಮುಖ ಕೊಂಡಿಯಾಗಿರುವ ಡ್ರೈವರ್ ಕಾರ್ತಿಕ್‌ನನ್ನು ಮಲೇಶಿಯಾಕ್ಕೆ ಕಳುಹಿಸಿದ್ದು ಏತಕ್ಕೆ? ಅಲ್ಲಿಗೆ ಹೋಗಲು ಸಹಾಯ ಮಾಡಿದವರು ಯಾರು? ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಹಿಂದೆ ಯಾರಿದ್ದಾರೆ? ಏನೇನು ಮಾಡುತ್ತಿದ್ದಾರೆ? ಎನ್ನುವುದು ಗೊತ್ತಿದೆ. ಈ ಸಮಯದಲ್ಲಿ ಡ್ರೈವರ್‌ನನ್ನು ಮಲೆಶಿಯಾಗೆ ಕಳುಹಿಸಲು ಪ್ಲಾನ್ ಮಾಡಿದವರು ಯಾರು? ಎಲ್ಲವೂ ಬಹಿರಂಗಗೊಳಿಸಲಿ ಎಂದು ಆಗ್ರಹಿಸಿದರು.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ನಾನುಈ ಮೊದಲೇ ಹೇಳಿದ್ದೇನೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ನೆಪದಲ್ಲಿ ಪೆನ್‌ಡ್ರೈವ್ ಮಾಡಿ ಹಂಚುವ ಮೂಲಕ ಹೆಣ್ಣುಮಕ್ಕಳ ಮಾನ ಹಾನಿ ಮಾಡಿದವರು ಯಾರು ಎನ್ನುವುದು ಬೆಳಕಿಗೆ ಬರಬೇಕು. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net