

ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತಮ್ಮ ಪತ್ನಿ ರಾಗಿಣಿ ಜೊತೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಮತ್ತೆ ವಧು ವರರಂತೆ ಮಿಂಚುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಜೋಡಿಯ ಈ ವಿಶೇಷ ಫೋಟೋಶೂಟ್ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಇಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಂತೂ ತಮ್ಮ ನೆಚ್ಚಿನ ಜೋಡಿ ಫೋಟೋಗೆ ಕಾಮೆಂಟ್ ಮಾಡುತ್ತಿದ್ದಾರೆ.ಮದುವೆ ವಾರ್ಷಿಕೋತ್ಸವದ ನಿಟ್ಟಿನಲ್ಲಿ ರಾಗಿಣಿ - ಪ್ರಜ್ವಲ್ ಜೋಡಿ ಅಕ್ಟೋಬರ್ 25 ರಂದು ಫೊಟೋ ಶೂಟ್ ಮಾಡಿಸಿಕೊಂಡಿದ್ದು, ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಉತ್ತರ ಭಾರತದ ವಧು ವರರಂತೆ ರಾಗಿಣಿ ಮತ್ತು ಪ್ರಜ್ವಲ್ ಮಿಂಚುತ್ತಿದ್ದಾರೆ.
ಇನ್ ಸ್ಟಾಗ್ರಾಂ ಖಾತೆಯಲ್ಲಿ ಮೂರು ಫೋಟೋಗಳನ್ನು ಶೇರ್ ಮಾಡಿದ್ದು, ಮತ್ತೊಂದು ವರ್ಷದ ಸೆಲೆಬ್ರೇಶನ್, ನಮ್ಮ ಲವ್ ಸ್ಟೋರಿಯನ್ನು ಎಲ್ಲಾ ಫ್ರೇಮ್ ನಲ್ಲಿ ಸೆರೆಹಿಡಿಯಲಾಗುವುದು ಎಂದು ಬರೆದುಕೊಂಡಿದ್ದಾರೆ.
ತ್ತೀಚೆಗೆ ಇಬ್ಬರೂ ತಮ್ಮ ಲವ್ ಆನಿವರ್ಸರಿಯನ್ನು ಸಹ ಸೆಲೆಬ್ರೇಟ್ ಮಾಡಿದ್ದರು.
ಈ ಮುದ್ದಾದ ಜೋಡಿ ತಮ್ಮ ಲವ್ ಸ್ಟೋರಿ (love story) ಬಗ್ಗೆ ತುಂಬಾ ಸಲ ಹೇಳಿದ್ದರು. ಇಬ್ಬರದ್ದು ಸ್ಕೂಲ್ ಡೇಸ್ ಲವ್ ಸ್ಟೋರಿ. ಪ್ರಜ್ವಲ್ 9ನೇ ತರಗತಿ ಮತ್ತು ರಾಗಿಣಿ 6ನೇ ಕ್ಲಾಸಲ್ಲಿರೋವಾಗ್ಲೇ ಲವ್ ಸ್ಟಾರ್ಟ್ ಆಗಿತ್ತು.
ರಾಗಿಣಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, ಫಿಟ್ನೆಸ್, ಟ್ರಾವೆಲ್, ಜೊತೆಗೆ ಅವರು ಸಹ ನಟನೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.