VIDEO | ಭಾರತಕ್ಕೆ ಬಂದಿಳಿದ ಯುವ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದಗೆ ಅದ್ಧೂರಿ ಸ್ವಾಗತ

praggnanandhaa
Published on

ಚೆನ್ನೈ: ಭಾರತದ ಯುವ ಚೆಸ್ ಸೆನ್ಸೇಷನ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ರನ್ನರ್ ಅಪ್ ಆಗಿರುವುದು ಗೊತ್ತೇ ಇದೆ. ಪಂದ್ಯ ಮುಗಿಸಿ ಮನೆಗೆ ವಾಪಸ್​ ಆಗಿರುವ ಪ್ರಜ್ಞಾನಂದ ಅವರಿಗೆ ಬುಧವಾರ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ರಾಜ್ಯ ಕ್ರೀಡಾ ಇಲಾಖೆಯ ಅಧಿಕಾರಿಗಳು ಅದ್ಧೂರಿ ಸ್ವಾಗತ ನೀಡಿದರು.

ಅಪಾರ ಸಂಖ್ಯೆಯ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿ ರಾಷ್ಟ್ರಧ್ವಜಗಳನ್ನು ಹಾರಿಸಿ ಘೋಷಣೆಗಳನ್ನು ಕೂಗಿದರು. ಪ್ರಜ್ಞಾನಂದ ಅವರಿಗೆ ಹೂವಿನ ಹಾರ, ಶಾಲು, ಹೂಗುಚ್ಛಗಳನ್ನು ಅರ್ಪಿಸಲು ಅಭಿಮಾನಿಗಳ ಜನಸಾಗರವೆ ಸೇರಿತ್ತು. ತಮಿಳುನಾಡಿನ ಜಾನಪದ ನೃತ್ಯಗಳೊಂದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಯುವಕರು ತ್ರಿವರ್ಣ ಧ್ವಜವನ್ನು ಹಿಡಿದುಪ್ರಜ್ಞಾನಂದ ಮುಂದೆ ಸಾಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಜ್ಞಾನಂದ, ಇಂತಹ ಆತ್ಮೀಯ ಸ್ವಾಗತದಿಂದ ನನಗೆ ತುಂಬಾ ಸಂತೋಷವಾಗಿದೆ ಎಂದರು. ಮತ್ತೊಂದೆಡೆ, ಅವರ ತಾಯಿ ನಾಗಲಕ್ಷ್ಮಿ ಅವರು 18 ವರ್ಷದ ಮಗನಿಗೆ ಸಿಕ್ಕಿದ ಅದ್ಧೂರಿ ಸ್ವಾಗತಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.

ಚೆಸ್​ ವಿಶ್ವಕಪ್​ ಫೈನಲ್​ನಲ್ಲಿ ಭಾರತದ ಕಿರಿಯ ಗ್ರ್ಯಾಂಡ್ ಮಾಸ್ಟರ್​ ಆರ್​ ಪ್ರಜ್ಞಾನಂದ ವಿರುದ್ಧ ವಿಶ್ವದ ನಂಬರ್​ 1 ಶ್ರೇಯಾಂಕಿತ ನಾರ್ವೆ ದೇಶದ ಮ್ಯಾಗ್ನಸ್ ಕಾರ್ಲ್​​ಸನ್​ ಜಯಭೇರಿ ಬಾರಿಸಿದ್ದರು. ಅಂತಿಮ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ (ನಾರ್ವೆ) ಪ್ರಜ್ಞಾನಂದ ವಿರುದ್ಧ ಜಯ ಸಾಧಿಸಿದರು. ಆದರೆ, ಫೈನಲ್‌ನಲ್ಲಿ ಸೋತರೂ ಅಮೋಘ ಹೋರಾಟ ನಡೆಸಿದ ಭಾರತದ ಯುವ ಆಟಗಾರನಿಗೆ ಸೆಲೆಬ್ರಿಟಿಗಳು ಮತ್ತು ನೆಟಿಜನ್‌ಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net