ಪ್ರಭು ಗುರಪ್ಪನವರಗೆ ತೊ.ನಂಜುಂಡಸ್ವಾಮಿ ಸ್ಮಾರಕ ರಾಜ್ಯ ಮಟ್ಟದ ರಂಗ ಪ್ರಶಸ್ತಿ

prabhu
Published on

ಬೆಂಗಳೂರು:

ಹಿರಿಯ ರಂಗಕರ್ಮಿ, ದಿ.ತೊ. ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಕೊಡಲಾಗುವ ಪ್ರತಿಷ್ಟಿತ ರಂಗ ಪ್ರಶಸ್ತಿಗೆ ರಂಗ ಸಂಘಟಕ, ರಂಗ ನಿರ್ದೇಶಕ ಪ್ರಭು ಗುರಪ್ಪನವರ ಆಯ್ಕೆಯಾಗಿದ್ದಾರೆ. ಫೆ.10 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಂಗಕರ್ಮಿಗಳಾದ ಶ್ರೀನಿವಾಸ ಕಪ್ಪಣ್ಣ, ಶಶಿಧರ ಅಡಪ, ಸೆಂಟರ್ ಸ್ಟೇಜ್ ಗಂಗಾಧರ, ಆರ್.ನರೇಂದ್ರಬಾಬು ಭಾಗವಹಿಸುವರು ಎಂದು ಗೆಳೆಯರ ಬಳಗದ ಸಂಚಾಲಕ ಗುಂಡಣ್ಣ ಚಿಕ್ಕಮಗಳೂರು ತಿಳಿಸಿದ್ದಾರೆ.

ಪರಿಚಯ:

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶೇಷಗಿರಿ ಎಂಬ ಪುಟ್ಟ ಹಳ್ಳಿಯಲ್ಲಿ ಜರುಗಿದ ರಂಗ ಚಳವಳಿಯ ಮುಖ್ಯರಲ್ಲಿ ಒಬ್ಬರು ಪ್ರಭು ಗುರಪ್ಪನವರ. ಸಾಮಾಜಿಕ ಚಟುವಟಿಕೆಗಳಿಂದ ಆರಂಭಿಸಿ ನಂತರ ರಂಗಭೂಮಿ ಚಟುವಟಿಕೆಗಳಿಗೆ ಹೊರಳಿಕೊಂಡ ಗುರಪ್ಪನವರ ಅವರು ಈ ಪುಟ್ಟ ಹಳ್ಳಿಯಲ್ಲಿ ರಂಗ ಮಂದಿರಕ್ಕೆ ಬೆನ್ನೆಲುಬಾದರು.

ಇಂದು ಶೇಷಗಿರಿಯ ರಂಗಮಂದಿರ ಅತ್ಯುತ್ತಮವಾದ ಧ್ವನಿ, ಬೆಳಕು ತಂತ್ರಜ್ಞಾನಗಳ ಮೂಲಕ ಸುಸಜ್ಜಿತ ರಂಗಮಂದಿರವಾಗಿದ್ದು ಇಡೀ ರಾಜ್ಯದ ಗಮನ ಸೆಳೆದಿದೆ. 40 ವಸಂತಗಳನ್ನು ಕಂಡಿರುವ ಗಜಾನನ ಯುವಕ ಮಂಡಳದ ಮೂಲಕ ಅನೇಕ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಪ್ರಭು ಗುರಪ್ಪನವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜೋಳದರಾಶಿ ದೊಡ್ಡನಗೌಡ ಪುರಸ್ಕಾರ, ಸಿಜಿಕೆ ರಂಗಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.

ಚಿತ್ರ ಶೀರ್ಷಿಕೆ:

ಬೆಂಗಳೂರಿನ ಸೆಂಟ್ ಜೋಸ್ೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಟಿವಿ5 ಸಂಪಾದಕ ರಮಾಕಾಂತ್ ಅವರನ್ನು ವಿಶ್ವವಿದ್ಯಾಲಯ ಉಪ ಕುಲಪತಿ ಡಾ.ರಜಿನಾ ಮಥಾಯಿಸ್ ಸನ್ಮಾನಿಸಿದರು. ರಿಜಿಸ್ಟಾರ್ ಮೆಲ್ವಿನ್ ಕೊಲಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net