

ನವದೆಹಲಿ: ಪ್ರಭಾಸ್ ಅಭಿನಯ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾ 'ಕಲ್ಕಿ 2898 ಎಡಿ' ಬಿಡುಗಡೆಯಾಗಿ. ನಾಲ್ಕನೇ ವಾರಾಂತ್ಯದಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರವು ಹಿಂದಿಯಲ್ಲಿ ಮೂರನೇ ಅತಿ ಹೆಚ್ಚು ಹಣ ಗಳಿಸಿದ ದಕ್ಷಿಣ ಭಾರತದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಲ್ಕಿ ಚಿತ್ರವು ವಿಶ್ವಾದ್ಯಂತ 1000 ಕೋಟಿ ರೂ.ಕ್ಲಬ್ ಸೇರಿದ 7ನೇ ಭಾರತೀಯ ಚಿತ್ರವಾಗಿ ಈಗಾಗಲೇ ದಾಖಲೆ ಸೃಷ್ಟಿಸಿರುವುದು ತಿಳಿದ ಸಂಗತಿಯೇ. ಬಿಡುಗಡೆಯಾಗಿ 25 ದಿನಗಳ ಕಾಲಾವಧಿಯಲ್ಲಿ ಭಾರತದಲ್ಲಿ ಕಲೆಕ್ಷನ್ 600 ಕೋಟಿ ದಾಟಿದೆ.
ಆರ್ಆರ್ಆರ್ ಹಿಂದಿಯಲ್ಲಿ 272 ಕೋಟಿ ರೂ ಸಂಗ್ರಹಿಸಿದರೆ, ಕಲ್ಕಿ ನಾಲ್ಕು ವಾರಗಳಲ್ಲಿ ರೂ 275.9 ಕೋಟಿ ಸಂಗ್ರಹಿಸಿದೆ.
ದೇಶದಲ್ಲಿ ಶಾರುಖ್ ಖಾನ್ ಅಭಿನಯದ ಜವಾನ್ 640.25 ಕೋಟಿ ರೂ. ಸಂಗ್ರಹ ಮಾಡಿದ್ದರೆ, 'ಕಲ್ಕಿ' 616.85 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಆಗಿದೆ. 'ಕಲ್ಕಿ' ರೇಂಜ್ ನ ಚಿತ್ರಗಳು ಇಲ್ಲದ ಕಾರಣ ಈ ಚಿತ್ರ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ.
ಇನ್ನು ಹಿಂದಿಯಲ್ಲಿ ದಕ್ಷಿಣದ ಬಾಹುಬಲಿ 2 511 ಕೋಟಿ ರೂ. ಸಂಗ್ರಹಿಸಿದ್ದರೆ, ಕೆಜಿಐಎಫ್ 2 435 ಕೋಟಿ ರೂ. ಬಾಚಿಕೊಂಡಿತ್ತು. ಕಲ್ಕಿ 5.275.9 ಕೋಟಿ ರೂ.ಸಂಗ್ರಹಿಸಿದ್ದು, ಆರ್ಆರ್ಆರ್ 272.78 ಕಲೆಕ್ಷನ್ ಮಾಡಿತ್ತು.
ಕಲ್ಕಿ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂ.ನ ಗ್ರಾಸ್ ಕ್ಲಬ್ಗೆ ಪ್ರವೇಶಿಸಿದೆ. ಈ ಸಾಧನೆ ಮಾಡಿದ ಏಳನೇ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ.