VIDEO: ಪವರ್​ಸ್ಟಾರ್ ಪುನೀತ್​ ರಾಜಕುಮಾರ್ ಕಿಲ್ಲಿಂಗ್​ ವರ್ಕೌಟ್​ ಹೇಗಿದೆ ನೋಡಿ...

maxresdefault
Published on

ಕನ್ನಡದ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಈಗಲೂ ತುಂಬ ಎನಿರ್ಜಿಟಿಕ್. ವಯಸ್ಸು 45 ಆದರೂ, ಇಂದಿಗೂ ಚಾರ್ಮಿಂಗ್​ ಮತ್ತು ಸದಾ ಆ್ಯಕ್ಟಿವ್​. ಅದಕ್ಕೆ ಕಾರಣ ಅವರ ನಿತ್ಯದ ಜೀವನ ಶೈಲಿ. ಹೌದು, ಪುನೀತ್​ ಅತ್ಯುತ್ತಮ ಡಾನ್ಸರ್​ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತು. ಆ ಡಾನ್ಸ್​ನಿಂದಲೇ ಪುನೀತ್​ ಈಗಲೂ ಯಂಗ್​ ಆಗಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅವರೇ ಈ ಸತ್ಯವನ್ನು ಬಾಯ್ಬಿಟ್ಟಿದ್ದರು. ನನ್ನ ಫಿಟ್​ನೆಸ್​ಗೆ ಡಾನ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು. ಈಗಾಗಲೇ ಅವರ ವರ್ಕೌಟ್​ ಸ್ಟೈಲ್​ ಹೇಗಿರುತ್ತದೆ ಎಂಬುದಕ್ಕೆ ಹಲವು ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದರು. ಇದೀಗ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ.

ಪುನೀತ್​ ಹೇಗೆಲ್ಲ ವರ್ಕೌಟ್​ ಮಾಡ್ತಾರೆ? ಜಿಮ್​ನಲ್ಲಿ ಅವರ ಇಷ್ಟದ ವ್ಯಾಯಾಮ ಯಾವುದು? ಅಭಿಮಾನಿ ವಲಯದಲ್ಲಿ ಹೀಗೆ ಬಗೆಬಗೆ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರವಿದೆ. ಮನೆಯಲ್ಲಿಯೇ ಇರುವ ಜಿಮ್​ನಲ್ಲಿ ಪುನೀತ್​ ಬೆವರಿಳಿಸುತ್ತಿದ್ದಾರೆ. ಈ ಹಿಂದೆ ಕಿಕ್​ ಬಾಕ್ಸಿಂಗ್​, ಲೆಗ್​ ಪಂಚಿಂಗ್​, ಸ್ಕಿಪ್ಪಿಂಗ್​, ಸಿಕ್ಸ್ ಪ್ಯಾಕ್​ ವರ್ಕೌಟ್​ ಮತ್ತು ಬೆಲ್ಲಿ ಫ್ಯಾಟ್​ ಬರ್ನಿಂಗ್​ ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದರು. ಇದೀಗ ವಿಭಿನ್ನ ರೀತಿಯ ಪುಷ್​ ಅಪ್ಸ್​ ಟ್ರಿಕ್ಸ್ ಹೇಳಿಕೊಟ್ಟಿದ್ದಾರೆ.

ಈ ರೀತಿಯ ವಿಡಿಯೋ ಶೇರ್​ ಮಾಡಿದ್ದಕ್ಕೆ, ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ನಿಮ್ಮ ಈ ವಿಡಿಯೋ ನಮಗೂ ಸ್ಫೂರ್ತಿಯಾಗಲಿದೆ ಎಂದು ಕೆಲವರು ಹೇಳಿದರೆ, ಪವರ್ ಆಫ್​ ಫಿಟ್​ನೆಸ್​ ಎಂದು ಮತ್ತೊಂದಿಷ್ಟು ಮಂದಿ ಕಮೆಂಟಿಸಿದ್ದಾರೆ. ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಪುನೀತ್​ ಫಿಟ್​ನೆಸ್​ ಕುರಿತ ಇದ್ದ ಅಭಿಮಾನಿಗಳ ಕುತೂಹಲವನ್ನು ಪವರ್​ಸ್ಟಾರ್ ತಣಿಸುತ್ತಿದ್ದಾರೆ. ಲಾಕ್​ಡೌನ್​ ತೆರವಾಗಿ ಶೂಟಿಂಗ್​ಗೆ ಅನುಮತಿ ಸಿಗುತ್ತಿದ್ದಂತೆ ‘ಯುವರತ್ನ’ ಮತ್ತು ‘ಜೇಮ್ಸ್’ ಸಿನಿಮಾಗಳ ಕೆಲಸಗಳಲ್ಲಿಯೂ ಅವರು ಬಿಜಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net