ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ನಾಳೆ

Published on

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿಯ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯವನ್ನು ಆ.3 ರಂದು ಬೆಳಗ್ಗೆ 10 ರಿಂದ 6 ಗಂಟೆವರೆಗೆ ಹಮ್ಮಿಕೊಂಡಿರುವುದರಿಂದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಮಧುವನ ಹಳ್ಳಿಯಿಂದ ಹೊರಹೊಮ್ಮುವ 11 ಕೆ.ವಿ. ಫೀಡರ್ ವ್ಯಾಪ್ತಿಗೆ ಬರುವ ಕೆಂಪನಪಾಳ್ಯ, ಕುರುಬನಕಟ್ಟೆ, ವಂಡರಬಾಳು, ಮಧುವನಹಳ್ಳಿ, ಎನ್.ಜೆ.ವೈ.ಜಕ್ಕಳ್ಳಿ, ಚನ್ನಲಿನಂಗನಹಳ್ಳಿ, ಕಣ್ಣೂರು, ಗುಂಡಾಲ್, ಬೂದುಬಾಳುವಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸೆಸ್ಕ್ ಎಇಇ ಎಂ.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net