ಕೊಳ್ಳೇಗಾಲ: ಪಟ್ಟಣದ ವಿದ್ಯುತ್ ಸ್ವೀಕರಣಾ ಕೇಂದ್ರದ ವ್ಯಾಪ್ತಿಗೆ ಬರುವ ಕೊಳ್ಳೇಗಾಲ, ಯಳಂದೂರು ಮತ್ತು ಹನೂರಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಉಪಯೋಗಿಸುವ 11 ಕೆವಿ ಫೀಡರ್ ದಾಸನಪುರ ನೀರು ಸರಬರಾಜು ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ಜು.13 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕೊಳ್ಳೇಗಾಲ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆವಿ ಫೀಡರ್‌ಗಳಾದ ದಾಸನಪುರ ವಾಟರ್ ಸಸ್ಪೈ, ಮು ಳ್ಳೂರು, ಐ.ಪಿ(ಕಟ್ಟವಾಡಿ), ಕುಣಗಳ್ಳಿ ಐ.ಪಿ, ಉತ್ತಂಬಳ್ಳಿ ಎನ್‌ಜೆವೈ, ಹರಳೆ ಐಪಿ, ಮುಡಿಗುಂಡ, ಸುಗರ್ ಪ್ಯಾಕ್ಟರಿ.
ಕೊಳ್ಳೇಗಾಲ ಟೌನ್-2 ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದರಿಂದ, ಕೊಳ್ಳೇಗಾಲ ಪಟ್ಟಣದ ಭೀಮನಗರ, ದೇವಾಂಗಪೇಟೆ, ದೊಡ್ಡನಾಯಕರ ಬೀದಿ, ಬೆಂಡಳ್ಳಿ-ಬೂದಿತಿಟ್ಟು, ಮುಡಿಗುಂಡ, ಶಂಕನಪುರ, ಬಾಪುನಗರ, ಕೊಳ್ಳೇಗಾಲ ಮೋಳೆ, ದಾಸನಪುರ, ಹರಳೆ, ಹಳೇ ಅಣಗಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಉತ್ತಂಬಳ್ಳಿ, ತೇರಂಬಳ್ಳಿ, ಗೊಬ್ಬಳಿಪುರ, ಮುಳ್ಳೂರು, ಹಳೇ ಹಂಪಾಪುರ ಮತ್ತು ಹೊಸ ಹಂಪಾಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸೆಸ್ಕ್ ಎಇಇ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.