ಮೈಸೂರು ನಗರದಲ್ಲಿ ವಿದ್ಯುತ್ ವ್ಯತ್ಯಯ

Vidyut 2 May 20
Published on

 ಮೈಸೂರು: ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ ದಕ್ಷಿಣ (ಸೌಥ್) ವಿದ್ಯುತ್ ವಿತರಣಾ ಕೇಂದ್ರದಿoದ ಹೊರಹೊಮ್ಮುವ ಜಯನಗರ ವಿದ್ಯುತ್ ಮಾರ್ಗ ಮತ್ತು ಆರ್.ಕೆ ವಿದ್ಯುತ್ ವಿತರಣಾ ಕೇಂದ್ರದಿoದ ಹೊರಹೊಮ್ಮುವ ಮಹಾಲಿಂಗೇಶ್ವರ ವಿದ್ಯುತ್ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಆಗಸ್ಟ್ 21 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 ಜಯನಗರ ವಿದ್ಯುತ್ ಮಾರ್ಗದ ವ್ಯಾಪ್ತಿಯ ಪ್ರದೇಶಗಳು: ಜಯನಗರ 1ನೇ ಕ್ರಾಸ್‌ನಿಂದ 20 ನೇ ಕ್ರಾಸ್‌ವರೆಗೆ, ಜಯನಗರ ಕೆ ಬ್ಲಾಕ್, ಚಿಕ್ಕಹರದನಹಳ್ಳಿ, ಅಪೋಲೋ ಆಸ್ಪತ್ರೆ ಸುತ್ತಮುತ್ತ, ಶ್ರೀರಾಂಪುರ 2 ನೇ ಹಂತ, ಆದಿಚುಂಚನಗಿರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

 ಮಹಾಲಿಂಗೇಶ್ವರ ವಿದ್ಯುತ್ ಮಾರ್ಗದ ವ್ಯಾಪ್ತಿಯ ಪ್ರದೇಶಗಳು: ನಿಮಿಷಾಂಬ ಬಡಾವಣೆ, ಕಂದಾಯ ಬಡಾವಣೆ, ಟೆಂಪಲ್ ಬೆಲ್ ಬಡಾವಣೆ, ಮಹಾಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತ, ಪ್ರೀತಿ ಬಡಾವಣೆ, ಹಂಸ ಬಡಾವಣೆ, ಕಂದಾಯನಗರ, ಗಿರಿಗೌಡ ಬಡಾವಣೆ, ಶ್ರೀರಾಂಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವೃತ್ಯಯವಾಗುವುದರಿಂದ, ಸಾರ್ವಜನಿಕರು ಸಹಕರಿಸಬೇಕು ಎಂದು ವಿ.ವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪದೆಕಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net