ಮುಂದೂಡಿದ್ದ ಪಿಎಸ್‌ಐ ಪರೀಕ್ಷೆ ಅ.3ಕ್ಕೆ ನಿಗದಿ: ಸಚಿವ ಪರಮೇಶ್ವರ್

g parameshwara
Published on

ಬೆಂಗಳೂರು: ಮುಂದೂಡಿದ ಪಿಎಸ್‌ಐ ಪರೀಕ್ಷೆಯನ್ನು ಅ.3ಕ್ಕೆ ನಿಗದಿ ಮಾಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಯುಪಿಎಸ್‌ಸಿ ಅಭ್ಯರ್ಥಿಗಳ ಹಿತ, ಪ್ರತಿಪಕ್ಷದ ಒತ್ತಾಯದ ಮೇರೆಗೆ 402 ಪಿಎಸ್‌ಐ ಹುದ್ದೆಗಳಿಗೆ ನಿಗದಿತ ಸೆ.22ರ ಪರೀಕ್ಷೆ ಮುಂದೂಡಲಾಗಿತ್ತು.

ನಂತರ ಕೆಇಎ ಸೆ.28ರ ಸ್ಲಾಟ್ ನೀಡಿತ್ತಾದರೂ ಮತ್ತೊಮ್ಮೆ ಯುಪಿಎಸ್‌ಸಿಗೆ ಸಂಪರ್ಕಿಸಿ ವಿಚಾರಿಸಿದಾಗ ಸೆ.28ಕ್ಕೂ ಇಂಗ್ಲಿಷ್ ಜನರಲ್ ಪರೀಕ್ಷೆಯಿರುವ ಮಾಹಿತಿ ನೀಡಿದರು. ಇದೀಗ ಕೆಇಎ ಅ.3ರ ಸ್ಲಾಟ್ ನೀಡಿದ್ದು, ಚರ್ಚಿಸಿ ಅಂತಿಮಗೊಳಿಸಲಾಗಿದೆ. ಕೆಇಎ ಅಧಿಕೃತವಾಗಿ ಈ ಕುರಿತು ಪ್ರಕಟಣೆ ನೀಡಲಿದೆ ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net