ನಿವೃತ್ತರಾದ ಪೋಸ್ಟ್ ಮ್ಯಾನ್‌ಗೆ ಸನ್ಮಾನ

ಪೋಸ್ಟ್‌ಮ್ಯಾನ್ ಆಗಿಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಿರುನಾಡು ಗ್ರಾಮದ ಬಿಟ್ಟಿರ ಮಾದಪ್ಪ ಅವರನ್ನು ಶನಿವಾರ ಭಗವತಿ ಸ್ತ್ರೀಶಕ್ತಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.  ನಾಳಿಯಂಡ ಅನಿತಾ, ಪಳಂಗಡ ಭಾನುಮತಿ , ನಾಳಿಯಂಡ ತಾರಾ, ಮಚಂಡ ಶಿಲ್ಪಾ, ಕುಂಬಂಡ ವನಿತಾ, ಬಾದುಮಂಡ ಮಮತಾ ಇತರರು ಇದ್ದರು.

Published on
ನಾಪೋಕ್ಲು: ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಿರುನಾಡು ಗ್ರಾಮದ ಬಿಟ್ಟಿರ ಮಾದಪ್ಪ ಅವರನ್ನು ಭಗವತಿ ಸ್ತ್ರೀ ಶಕ್ತಿ ಸಂಘದ ವತಿಯಿಂದ ಶನಿವಾರ ಸನ್ಮಾನಿಸಲಾಯಿತು. ಕಿರುನಾಡು ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಡೆಯಂಡ ಯಶೋಧಾ, ಗ್ರಾಮದಲ್ಲಿ 45 ವರ್ಷಗಳಿಂದ ಬಿಟ್ಟಿರ ಮಾದಪ್ಪ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆಂದು ಶ್ಲಾಘಿಸಿದರು.
ಭಗವತಿ ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳಾದ ನಾಳಿಯಂಡ ಅನಿತಾ, ಪಳಂಗಡ ಭಾನುಮತಿ , ನಾಳಿಯಂಡ ತಾರಾ, ಮಚಂಡ ಶಿಲ್ಪಾ, ಕುಂಬಂಡ ವನಿತಾ, ಬಾದುಮಂಡ ಮಮತಾ,
ನಾಟೋಳಂಡ ಭಾಗೀರಥಿ , ಭೋಜಮ್ಮ , ಬಿಟ್ಟಿರ ಪ್ರೇಮಾ, ರಾಧಾಮಣಿ
ದೇವಮಾಜಿ ಉಪಸ್ಥಿತರಿದ್ದರು. ಪತ್ನಿ ಸಹಿತ ಬಿಟ್ಟಿರ ಮಾದಪ್ಪ ಅವರಿಗೆ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಲಾಯಿತು.
11-ಎನ್ ಪಿ ಕೆ-1.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net