ಬಿಜೆಪಿ, ಕಾಂಗ್ರೆಸ್ ನಡುವೆ ಪೋಸ್ಟರ್ ಟ್ವೀಟ್ ವಾರ್; ಹಂತಕ ಸಿದ್ದರಾಮಯ್ಯ ಎಂದ ಬಿಜೆಪಿ

BJP vs Congress
Published on

ಬೆಂಗಳೂರು:
ಕಾಂಗ್ರೆಸ್ ಮತ್ತು ಬಿಜೆಪಿ ಪೋಸ್ಟರ್ ಟ್ವೀಟ್ ವಾರ್ ಮುಂದುವರಿದಿದೆ.
ಸತ್ತ ಹೆಣಗಳ ಮುಂದೆ ರೈತರನ್ನು ಉಳಿಸಿ, ಕಾವೇರಿ ಉಳಿಸಿ ಎಂದು ಟ್ಯಾಗ್ ನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೋಟೋ ಹಾಕಿ ರೈತ ಹಂತಕ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬಿತ್ತನೆ ಬೀಜ ಪೂರೈಸದೆ, ಬರ ಪರಿಹಾರ ಒದಗಿಸದೆ, ಜೀವನದಿ ಕಾವೇರಿಯನ್ನು ತಮ್ಮ ಲಾಭಕ್ಕಾಗಿ ತಮಿಳುನಾಡಿಗೆ ಹರಿಯಬಿಟ್ಟು, ಕೇವಲ 100 ದಿನದ ಆಡಳಿತದಲ್ಲಿ ರಾಜ್ಯದ 200ಕ್ಕೆ ಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವವರು ಇವರೇ ಎಂದು ಟ್ವೀಟ್‌ನಲ್ಲಿ ಟೀಕಿಸಲಾಗಿದೆ.
ಸತ್ತ ಹೆಣಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಹಾಕಿ ವೋಟ್ ಹಂಟರ್ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್‌ಗೆ ಪ್ರತಿಯಾಗಿ ಬಿಜೆಪಿ ಈ ಟ್ವೀಟ್ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net