ಪೋರ್ಟ್​ಲ್ಯಾಂಡ್​ನಲ್ಲಿ ಕನ್ನಡಾಧಿಪತಿ; ಬೆಂಗಳೂರಿನಿಂದಲೇ ಕನ್ನಡ ಪುಸ್ತಕ ಖರೀದಿಸಿ ಬಹುಮಾನ..

PL F N
Published on

ಬೆಂಗಳೂರು: ಒರೆಗನ್​ನಲ್ಲಿರುವ 'ಪೋರ್ಟ್​ಲ್ಯಾಂಡ್ ಕನ್ನಡ ಕೂಟ'ದವರು ಆಯೋಜಿಸಿದ್ದ 'ಪೋರ್ಟ್​ಲ್ಯಾಂಡ್ ಕನ್ನಡಾಧಿಪತಿ' ರಸಪ್ರಶ್ನೆ ಸ್ಪರ್ಧೆಯ ಗ್ರ್ಯಾಂಡ್​ ಫಿನಾಲೆ ಇತ್ತೀಚೆಗಷ್ಟೇ ನಡೆದಿದೆ. ಮಕರ ಸಂಕ್ರಮಣದಂದು ಆರಂಭವಾದ ಈ ಕಾರ್ಯಕ್ರಮ ಫೆ. 5ರಂದು ಗ್ರ್ಯಾಂಡ್ ಫಿನಾಲೆ ನಡೆಯುವುದರೊಂದಿಗೆ ಮುಕ್ತಾಯಗೊಂಡಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಹಾಗೂ ವಿಜೇತರಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಅವರು ಶುಭ ಹಾರೈಸಿದ್ದು, ರಸಪ್ರಶ್ನೆ ಸ್ಪರ್ಧೆಯ ಆರಂಭದಿಂದಲೂ ನಟಿ ಪದ್ಮಜಾ ರಾವ್ ಅವರು ಈ ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ಬೆಂಬಲವನ್ನು ವ್ಯಕ್ತಪಡಿಸಿದ್ದರು.

ಕಿರಿಯರ ಹಾಗೂ ಹಿರಿಯರ ಎಂದು ಎರಡು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿದೆ. ಕಿರಿಯರ ವಿಭಾಗದಲ್ಲಿ ಇಶಾನ್ ಸೆಗವಾಳು ಹಾಗೂ ಹಿರಿಯರ ವಿಭಾಗದಲ್ಲಿ ವಿನಾಯಕ್ ಕುರುವೇರಿ ಅವರು ವಿಜೇತರಾಗಿದ್ದಾರೆ. ವಿಜೇತರಿಗೆ ಬೆಂಗಳೂರಿನಿಂದಲೇ ಕನ್ನಡ ಪುಸ್ತಕಗಳನ್ನು ಖರೀದಿಸಿ ತರಿಸಿಕೊಂಡು ಬಹುಮಾನವಾಗಿ ವಿತರಿಸಿದ್ದು ವಿಶೇಷ ಎನ್ನಲಾಗಿದೆ.

ಕಿರಿಯರ ವಿಭಾಗದಲ್ಲಿ ಬಹುಮಾನ ವಿಜೇತ ಇಶಾನ್ ಸೆಗವಾಳು
ಹಿರಿಯರ ವಿಭಾಗದಲ್ಲಿ ಬಹುಮಾನ ವಿಜೇತ ವಿನಾಯಕ್ ಕುರುವೇರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net