ಸರ್ಕಾರದ ಮೆಸೇಜಿಂಗ್​ ಸಿಸ್ಟಮ್​ನಲ್ಲಿ ಅಶ್ಲೀಲ ಚಾಟ್‌ ಮಾಡುತ್ತಿದ್ದ 100ಕ್ಕೂ ಅಧಿಕ ನೌಕರರು ವಜಾ! Donald Trump

Donald Trump
Published on

Donald Trump : ಸರ್ಕಾರದ ಮೆಸೇಜಿಂಗ್​ ಸಿಸ್ಟಮ್​ನಲ್ಲಿ ತಮ್ಮ ಸೆಕ್ಸ್​ ಲೈಫ್​ ಬಗ್ಗೆ ಚಾಟಿಂಗ್​ ಮಾಡುತ್ತಿದ್ದ 100ಕ್ಕೂ ಅಧಿಕ ಅಧಿಕಾರಿಗಳನ್ನು ಅಮೆರಿಕ ಸರ್ಕಾರ ವಜಾ ಮಾಡಿದೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಆ ದೇಶದಲ್ಲಿ ವಿವಿಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡಲು ರಚಿಸಲಾಗಿರುವ ಸರ್ಕಾರಿ ದಕ್ಷತಾ ಇಲಾಖೆ ( DOGE ) ಯ ಮುಖ್ಯಸ್ಥರಾಗಿ ಎಲಾನ್ ಮಸ್ಕ್ ಅವರನ್ನು ನೇಮಿಸಲಾಗಿದೆ. ಈಗಾಗಲೇ ಅನೇಕ ದೇಶಗಳಿಗೆ ಹಣದ ನೆರವು ನೀಡುವುದನ್ನು ನಿಲ್ಲಿಸುತ್ತಿದ್ದಾರೆ ಮತ್ತು ಸರ್ಕಾರಿ ನೌಕರರನ್ನು ಆಕ್ರಮಣಕಾರಿಯಾಗಿ ವಜಾಗೊಳಿಸುತ್ತಿದ್ದಾರೆ.

ಇದರ ನಡುವೆ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರು 100ಕ್ಕೂ ಅಧಿಕ ಹೆಚ್ಚು ಗುಪ್ತಚರ ಇಲಾಖೆ ನೌಕರರನ್ನು ವಜಾಗೊಳಿಸಿದ್ದಾರೆ. CIA, FBI, NAS ಮತ್ತು INR ಸೇರಿದಂತೆ 18 ಅಮೆರಿಕನ್ ಗುಪ್ತಚರ ಸಂಸ್ಥೆಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ತುಳಸಿ ಗಬ್ಬಾರ್ಡ್ ಅವರು ಹೊಂದಿದ್ದಾರೆ.

ಅಮೆರಿಕದ ಗುಪ್ತಚರ ಅಧಿಕಾರಿಗಳು ತಮ್ಮ ಕ್ಲಾಸೀಫೈಡ್​ ಮಾಹಿತಿಯನ್ನು ಚರ್ಚಿಸಲು ರಾಷ್ಟ್ರೀಯ ಭದ್ರತಾ ಸಂಸ್ಥೆಯು ಇಂಟೆಲಿಂಕ್ ಎಂಬ ವಿಶೇಷ ಚಾಟ್ ರೂಮ್ ಅನ್ನು ರಚಿಸಿದೆ. ಪತ್ರಕರ್ತ ಕ್ರಿಸ್ಟೋಫರ್ ರುಫೊ ಅವರು ಗುಪ್ತಚರ ಅಧಿಕಾರಿಗಳು ಚಾಟ್​ ರೂಮ್​ನಲ್ಲಿ ಅಶ್ಲೀಲ ಚಾಟ್‌ಗಳಲ್ಲಿ ತೊಡಗಿದ್ದರು ಎಂಬುದನ್ನು ಸಾಕ್ಷಿ ಸಮೇತ ಇತ್ತೀಚೆಗೆ ಬಹಿರಂಗಪಡಿಸಿದರು.

ಮಾಹಿತಿ ಬಿಡುಗಡೆಯಾದ ತಕ್ಷಣ, ತುಳಸಿ ಗಬ್ಬಾರ್ಡ್ ಅವರು ಅದರ ಸತ್ಯಾಸತ್ಯತೆಯನ್ನು ದೃಢಪಡಿಸಿ, ಅದರಲ್ಲಿ ಭಾಗಿಯಾಗಿದ ಉದ್ಯೋಗಿಗಳ ಬಗ್ಗೆ ತನಿಖೆಗೆ ಆದೇಶಿಸಿದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 15 ವಿವಿಧ ಗುಪ್ತಚರ ಸಂಸ್ಥೆಗಳಿಂದ 100 ಕ್ಕೂ ಹೆಚ್ಚು ಅಧಿಕಾರಿಗಳನ್ನು ತಕ್ಷಣವೇ ವಜಾಗೊಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net