ಪೋಪ್ ಅಧಿಕಾರ ಸ್ವೀಕಾರ ವಿಶ್ವಶಾಂತಿಯ ಸಂದೇಶ

pop
Published on

ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಉತ್ತರಾಧಿಕಾರಿಯಾಗಿ ಅಮೆರಿಕದ ಪೋಪ್ ಲಿಯೋ 14 ಅಧಿಕಾರ ಸ್ವೀಕರಿಸಿ ಕ್ಯಾಥೋಲಿಕ್ ಚರ್ಚ್ ವಿಶ್ವದಲ್ಲಿ ಶಾಂತಿಯ ಸಂಕೇತವಾಗುವಂತೆ ಏಕತೆಗಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಚೌಕದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ರೋಮನ್ ಕ್ಯಾಥೋಲಿಕ್​ರ 267 ನೇ ಪೋಪ್ ಆಗಿ ಆಯ್ಕೆಯಾಗಿದ್ದ ಪೋಪ್ ಲಿಯೋ 14 ಅಧಿಕಾರ ಸ್ವೀಕರಿಸಿದರು. ಆ ಬಳಿಕ ಪೋಪ್ ಬಳಸುವ ತೆರೆದ ವಾಹನದಲ್ಲಿ ತೆರಳಿ ಚೌಕದಲ್ಲಿ ನೆರೆದಿದ್ದ ಅನುಯಾಯಿಗಳಿಗೆ ಅಶೀರ್ವಾದ ನೀಡಿದರು. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸುಮಾರು ಹಲವು ದೇಶಗಳ ಅಧ್ಯಕ್ಷರು, ರಾಜಕುಮಾರರು ಸೇರಿ 2 ಲಕ್ಷ ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಹಿಂದಿನ ಪೋಪ್ ಫ್ರಾನ್ಸಿಸ್ ಅವರು ತಮ್ಮ ಸರಳ ಶೈಲಿಯ ಭಾಗವಾಗಿ ಪೋಪ್ ಹುದ್ದೆಯ ಹಲವು ಔಪಚಾರಿಕತೆಗಳನ್ನು ತ್ಯಜಿಸಿದ್ದರು. ಆದರೆ ಲಿಯೋ 14 ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಕ್ರೖೆಸ್ತ ಸಂಪ್ರದಾಯವಾದಿಗಳಿಗೆ ಸಂತಸ ತಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net