ಬಿಡಿಎ ಖಾಲಿ ಸೈಟ್‌ಗಳ ವಿರುದ್ಧ ಲೋಕಾ ಕೆಂಗಣ್ಣು; ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆಗೆ ಆದೇಶ

lokayuktha
Published on

ಬೆಂಗಳೂರು: ಬಿಡಿಎ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಖಾಲಿ ಇರುವ ಸೈಟ್ ಮತ್ತು ನಿರ್ವಹಣೆ ಮಾಡದೆ ಪೊದೆ ಬೆಳೆದಿರುವ ಸಂಬಂಧ ಲೋಕಾಯುಕ್ತ ಸಂಸ್ಥೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಬಿಡಿಎ 48 ವರ್ಷಗಳ ಹಿಂದೆ ಎಚ್‌ಆರ್‌ಬಿಆರ್, ಒಎಂಬಿಆರ್, ಈಸ್ಟ್ ಆ್ ಎನ್‌ಜಿಇಎ್ ಮತ್ತು ಎಚ್‌ಬಿಆರ್ ಲೇಔಟ್ ನಿರ್ಮಿಸಿ ಅರ್ಹ ಅಭ್ಯರ್ಥಿಗಳಿಗೆ ಸೈಟ್ ಹಂಚಿಕೆ ಮಾಡಿದೆ. 3 ವರ್ಷಗಳ ಒಳಗಾಗಿ ಮನೆ ನಿರ್ಮಾಣ ಮಾಡಬೇಕೆಂಬ ಷರತ್ತು ವಿಧಿಸಿದೆ. ಆದರೆ, ಅನೇಕರು ಮನೆ ನಿರ್ಮಾಣ ಮಾಡದೆ ಖಾಲಿ ಸೈಟ್ ಬಿಟ್ಟಿದ್ದಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕಲ್ಯಾಣನಗರದ ಸಿ.ಎಂ. ಸುಬ್ಬಯ್ಯ ಎಂಬುವರು ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ ಬಿಡಿಎ ನಿರ್ಮಾಣ ಮಾಡಿರುವ ಬಡಾವಣೆಗಳ ಪರಿಶೀಲನೆ ನಡೆಸಿ ವರದಿ ಒಪ್ಪಿಸಲು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಜತೆಗೆ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಗುರುವಾರ ಆದೇಶ ಹೊರಡಿಸಿದ್ದಾರೆ.

ಖಾಲಿ ಸೈಟ್‌ಗಳಲ್ಲಿ ಗಿಡಮರ ದಟ್ಟವಾಗಿ ಬೆಳೆದು ವಿಷ ಜಂತುಗಳು ಸೇರಿಕೊಂಡಿವೆ. ಘನ, ದ್ರವ ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳನ್ನು ತುಂಬಲಾಗುತ್ತಿದೆ. ಪರಿಣಾಮ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿ ಚಿಕನ್‌ಗೂನ್ಯ, ಡೆಂಗ್ಯೂ, ಮಲೇರಿಯಾ ಬರುತ್ತಿದೆ.

ಇದನ್ನು ತಪ್ಪಿಸಲು ಬಿಬಿಎಂಪಿ 2015ರಲ್ಲಿ ಖಾಲಿ ಸೈಟ್‌ಗಳಲ್ಲಿ ಕಸದ ರಾಶಿ ಮತ್ತು ಅವಶೇಷಗಳು ತೆರವು ಮಾಡಬೇಕೆಂದು ಕರ್ನಾಟಕ ಮುನ್ಸಿಲ್ ಕಾರ್ಪೋರೇಷನ್ ಕಾಯ್ದೆಯಡಿ ನಿವೇಶನ ಮಾಲೀಕರಿಗೆ ಆದೇಶಿಸಿದ್ದಾರೆ. ಬಿಬಿಎಂಪಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರಿದೆ.

ಬಿಡಿಎ ಖಾಲಿ ಸೈಟ್‌ಗಳ ವಿಧಿಸುವ ತೆರಿಗೆಯಲ್ಲಿ ನಿರ್ವಹಣಾ ವೆಚ್ಚವನ್ನು ಪ್ರತ್ಯೇಖವಾಗಿ ಸಂಗ್ರಹಿಸಿದೆ. ಆದರೂ ನಿರ್ವಹಣೆ ಮಾಡದೆ ಕರ್ತವ್ಯ ಲೋಪ ಎಸಗಿದ್ದು, ಇದು ಮೇಲ್ನೋಟಕ್ಕೆ ಕಂಡು ಬಂದಿದೆ. ಬೆಂಗಳೂರು ಉತ್ತರ ಮತ್ತು ಇನ್ನಿತರ ವಿಭಾಗಗಳಲ್ಲಿ ಕಸ ವಿಲೇವಾರಿ ದಿನನಿತ್ಯ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಸಹ ಸಾಕಷ್ಟು ಬರುತ್ತಿವೆ. ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಬಿ.ಎಸ್.ಪಾಟೀಲ್, ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ವಿಚಾರಣೆಗೆ ಬುಲಾವ್ :

ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಬಿಡಿಎ ಆಯುಕ್ತ, ಬಿಬಿಎಂಪಿ ಮುಖ್ಯ ಆಯುಕ್ತ, ವಿಶೇಷ ಆಯುಕ್ತ(ಆರೋಗ್ಯ), ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರು ಸೇರಿದಂತೆ ಬಿಬಿಎಂಪಿ ಮತ್ತು ಬಿಡಿಎಗೆ ಸೇರಿದ 19 ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಸೂಚಿಸಿದ್ದಾರೆ.

3 ವಿಶೇಷ ತಂಡ ರಚನೆ :

ಲೋಕಾಯುಕ್ತ ಸಂಸ್ಥೆ ಬೆಂಗಳೂರು ನಗರ-1 ಎಸ್‌ಪಿ ಶ್ರೀನಾಥ್ ಮಹಾದೇವ್ ಜೋಶಿ, ಬೆಂಗಳೂರು ನಗರ-2 ಎಸ್‌ಪಿ ಡಾ.ಕೋನಾ ವಂಶಿಕೃಷ್ಣ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್‌ಪಿ ಪವನ್ ನೆಜ್ಜೂರು ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಬಿಡಿಎ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಿಗೆ ಖುದ್ದಾಗಿ ಭೇಟಿ ಕೊಟ್ಟು ಖಾಲಿ ಸೈಟ್‌ಗಳು ಮತ್ತು ಇತರ ಪ್ರದೇಶಗಳಲ್ಲಿ ಗಿಡ, ಮರ, ಪೊದೆಗಳ ಮತ್ತು ತ್ಯಾಜ್ಯದ ಬಗ್ಗೆ ಮಾಹಿತಿ ಕಲೆ ಹಾಕಿ ೆಟೋ ಸಮೇತ ವರದಿ ಸಲ್ಲಿಸಬೇಕು. ಒಂದು ವೇಳೆ ಅಧಿಕಾರಿಗಳು ನ್ಯೂನತೆಗಳನ್ನು ಪರಿಶೀಲಿಸಿ ಪರಿಹರಿಸಿದರೇ ಅದನ್ನು 6 ವಾರಗಳ ಒಳಗಾಗಿ ವರದಿ ಸಲ್ಲಿಸಬೇಕೆಂದು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net