ಅಂಗನವಾಡಿ ಮಕ್ಕಳಿಗೆ ಕಳಪೆ ಮಟ್ಟದ ಬೆಲ್ಲ ಪೂರೈಕೆ; ಇದೇನು ಬೆಲ್ಲನೋ? ಗೊಬ್ಬರಾನೋ? ಪೋಷಕರ ಆಕ್ರೋಶ

poor food supply to anganwadis
Published on

ಹಾವೇರಿ: ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಅನ್ನ ಸಾಂಬರ್ ಹೊರತುಪಡಿಸಿ ಪ್ಯಾಕೆಟ್ ಗಳಲ್ಲಿ ಪೂರೈಕೆ ಮಾಡುವ ಆಹಾರ ಪದಾರ್ಥಗಳು ತೀರ ಕಳಪೆ ಗುಣಮಟ್ಟದಿಂದ ಕೂಡಿವೆ. ಅಂಗನವಾಡಿ ಮಕ್ಕಳಿಗೆ ಕೊಟ್ಟ ಕಳಪೆ ಬೆಲ್ಲ ನೋಡಿ  ಪಾಲಕರು ಕಂಗಾಲಾಗಿದ್ದಾರೆ.

ಅಂಗನವಾಡಿ ಮಕ್ಕಳ ಬಳಕೆಗಾಗಿ ಮನೆಗೆ ಕೊಡುವ ಬೆಲ್ಲ ನೋಡಿದರೆ ವಾಕರಿಕೆ ಬರೋದು ಗ್ಯಾರಂಟಿ. ಅಷ್ಟೊಂದು ಕಳಪೆ ಮಟ್ಟದ  ಬೆಲ್ಲವನ್ನು ನೀಡಲಾಗುತ್ತಿದೆ.  6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಕೊಡುವ ಬೆಲ್ಲ ನೋಡಿ ಬೆರಗಾದ ಪಾಲಕರು ಇದೇನು ಬೆಲ್ಲನೋ? ಸಾವಯವ ಗೊಬ್ಬರಾನೋ? ಎಂದು  ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಾ ಎಡವಟ್ಟಿನಿಂದಾಗಿ ಮಕ್ಕಳಿಗೆ ಕೊಡುವ ಪುಷ್ಟಿ ಪೌಷ್ಟಿಕ ಆಹಾರ ಇತ್ತ ಧನಕರುಗಳ ಪಾಲಾಗುತ್ತಿದೆ.  6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಕೊಡುವ ಪುಷ್ಟಿ ಪೌಷ್ಟಿಕ ಆಹಾರ ಧನಕರುಗಳಿಗೆ ಇಡುತ್ತಿರುವ ಪಾಲಕರು ಇವರು ಕೊಡುವ ಪುಷ್ಟಿ ಪೌಡರ್ ದನ ಕರುಗಳು ಮಾತ್ರ ತಿನ್ನೋಕೆ ಸಾಧ್ಯ. ಮಕ್ಕಳು ತಿನ್ನೋಕೆ ಇಷ್ಟ ಪಡಲ್ಲ ಎಂದು ಪಾಲಕರು ಹೇಳುತ್ತಿದ್ದಾರೆ.

ಪುಷ್ಟಿ ಪೌಡರ್ ನಲ್ಲಿ ಲಾಡು ಮಾಡಿ ತಿನ್ನಿಸಿದರೆ ಮಕ್ಕಳು ತಿನ್ನಲ್ಲ. ಅಜೀರ್ಣ ಸಮಸ್ಯೆ ಉಂಟಾಗುತ್ತಿದೆ. ಪುಷ್ಟಿ ಪೌಡರ್ ಹಸು, ಎಮ್ಮೆ, ಎತ್ತುಗಳಿಗೆ ನೀಡಲಾಗುತ್ತಿದೆ.  ಮಕ್ಕಳಿಗೆ ಹೊಟ್ಟೆ ಉಬ್ಬರ, ಹೊಟ್ಟೆ ನೋವು ಬರುತ್ತೆ ಅಂತಿರೋ ಎನ್ನುತ್ತಿರುವ ಪೋಷಕರು ಬೆಲ್ಲ, ಪುಷ್ಟಿ ಪೌಡರ್ ಬದಲು ಒಳ್ಳೆಯ ಆಹಾರ ಪದಾರ್ಥಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net