

ಇನ್ಯಾವತ್ತೂ ಮಾಲ್ಡೀವ್ಸ್ಗೆ ಹೋಗಲ್ಲ ಎಂದ್ರು ಪೂನಂ ಪಾಂಡೆ
ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಲ್ಡೀವ್ಸ್ಗೆ ಭೇಟಿ ನೀಡಿದ ನಂತರ ಮಾಲ್ಡೀವಿಯನ್ ಮಂತ್ರಿಗಳ ಅವಹೇಳನಕಾರಿ ಹೇಳಿಕೆಗಳ ನಡುವಿನ ಗದ್ದಲದ ನಡುವೆ ಇಂಟರ್ನೆಟ್ ಸೆನ್ಸೇಷನ್ ಮತ್ತು ನಟಿ ಪೂನಂ ಪಾಂಡೆ ನಾನು ಮಾಲ್ಡೀವ್ಸ್ಗೆ ಹೋಗುವುದಿಲ್ಲ ಎಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ಗೆ ಮಾಲ್ಡೀವ್ಸ್ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಚಿವರೊಬ್ಬರು ಪ್ರಧಾನಿಯವರನ್ನು ಇಸ್ರೇಲಿ ಕೈಗೊಂಬೆ ಎಂದು ಬಣ್ಣಿಸಿ ನಿಂದಿಸಿದ್ದರು. ಭಾರತವನ್ನು ಹಸುವಿನ ಸಗಣಿಗೆ ಹೋಲಿಸಲಾಗಿತ್ತು. ಇನ್ನು ಇಬ್ಬರು ಸಚಿವರು ಕೂಡ ಇದೇ ರೀತಿಯ ಅನುಚಿತ ಹೇಳಿಕೆ ನೀಡಿದ್ದರು.
ಭಾರತ ಮತ್ತು ಮಾಲ್ಡೀವ್ಸ್ ನಡುವೆ ನಡೆಯುತ್ತಿರುವ ಈ ವಿಚಾರವಾಗಿ ಭಾರತೀಯರು ಬೆಸರ ಹೊರ ಹಾಕಿದ್ದರು. ಹಲವಾರು ಸೆಲೆಬ್ರಿಟಿಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಅವರು ಎಂದಿಗೂ ಭೇಟಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈಗ ನಟಿ ಪೂನಂ ಪಾಂಡೆ ಕೂಡಾ ಹೀಗೆ ಹೇಳಿದ್ದಾರೆ.
ಭಾನುವಾರದ ತಡರಾತ್ರಿಯಲ್ಲಿ, ಪೂನಂ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಳು, ಮಾಲ್ಡೀವ್ಸ್ಗೆ ತನ್ನ ಕೆಲಸದ ಪ್ರವಾಸವನ್ನು ರದ್ದುಗೊಳಿಸಿದ್ದೇನೆ. ನನಗೆ ಮಾಲ್ಡೀವ್ಸ್ನಲ್ಲಿ ಶೂಟ್ ಂಆಡುವುದು ಎಂದರೆ ಇಷ್ಟ. ಆದರೆ ಇನ್ನು ಮುಂದೆ ಮಾಲ್ಡೀವ್ಸ್ನಲ್ಲಿ ಶೂಟ್ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ನಾನು ಮತ್ತೆ ಮಾಲ್ಡೀವ್ಸ್ನಲ್ಲಿ ಶೂಟ್ ಮಾಡುವುದಿಲ್ಲ. ನನ್ನ ಮುಂದಿನ ಚಿತ್ರೀಕರಣವನ್ನು ಮಾಲ್ಡೀವ್ಸ್ನಲ್ಲಿ ಮಾಡಲು ಯೋಜಿಸಿದಾಗ, ಈ ಶೂಟಿಂಗ್ ಮಾಲ್ಡೀವ್ಸ್ನಲ್ಲಿ ಇತ್ತು ನಾನು ಬರುವುದಿಲ್ಲ ಎಂದು ನನ್ನ ತಂಡಕ್ಕೆ ಹೇಳಿದೆ. ಅದೃಷ್ಟವಶಾತ್, ಅವರು ಒಪ್ಪಿಕೊಂಡರು ಮತ್ತು ಈಗ ಲಕ್ಷದ್ವೀಪ್ನಲ್ಲಿ ಚಿತ್ರೀಕರಣ ಮಾಡಲು ಆಶಿಸುತ್ತೇನೆ ಎಂದಿದ್ದಾರೆ.
ಮಾಲ್ಡೀವಿಯನ್ ನಾಯಕರ ವಿವಾದಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡಿದ ನಂತರ, ಹಲವಾರು ಖ್ಯಾತ ನಟ, ನಟಿಯರು ಇನ್ನು ಮುಂದೆ ದ್ವೀಪಸಮೂಹಕ್ಕೆ ಭೇಟಿ ನೀಡುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದರು ಮತ್ತು ಬದಲಾಗಿ, ತಮ್ಮದೇ ದೇಶದ ಕಡಲತೀರಗಳು ಮತ್ತು ದ್ವೀಪಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡುವುದಾಗಿ ಹೇಳಿಕೊಂಡಿದ್ದಾರೆ.