ಅರ್ಚಕರ ನೇಮಕವಾದರೂ ವೇತನ ಕೊಡ್ತಿಲ್ಲ!

Published on


ಬೆಂಗಳೂರು:
ಚಿಕ್ಕಮಗಳೂರು ತಾಲ್ಲೂಕಿನ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯು ಧಾರ್ಮಿಕ ದತ್ತಿ ಇಲಾಖೆಯ ಎ ವರ್ಗದ ಸಂಯುಕ್ತ ಧಾರ್ಮಿಕ ಸಂಸ್ಥೆಯಾಗಿದ್ದು, ಹಲವು ಹೋರಾಟಗಳ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅರ್ಚಕರ ನೇಮಕವಾಗಿದ್ದರೂ, ಸಹ ಈವರೆಗೆ ಅರ್ಚಕರಿಗೆ ವೇತನ ನಿಗದಿಪಡಿಸಿರುವುದಿಲ್ಲ ಎಂದು ಬಿಜೆಪಿ ಸಿ.ಟಿ.ರವಿ ಶೂನ್ಯ ವೇಳೆಯಲ್ಲಿ ಗಮನ ಸೆಳೆದರು.
ಈ ಹಿಂದೆ ನೇಮಕವಾಗಿರುವ ಮುಜಾವರ್‌ಗಳಿಗೆ ವೇತನ ನೀಡುತ್ತಿದ್ದರೂ ಅರ್ಚಕರಿಗೆ ಮಾತ್ರ ವೇತನ ನೀಡದಿರುವುದನ್ನು ನೋಡಿದರೆ, ಇದು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎನ್ನುವ ರೀತಿ ಆಗಿದೆ ಎಂದರು.
ಸರ್ಕಾರ ಕೂಡಲೆ ಅರ್ಚಕರಿಗೂ ಸಹ ಸೂಕ್ತ ವೇತನ ನಿಗದಿಪಡಿಸಿ ಪ್ರತೀ ತಿಂಗಳು ಕಾಲಮಿತಿಯೊಳಗೆ ವೇತನ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net