ಸ್ಟಾರ್​ ನಟನ ಜೊತೆ ಡೇಟಿಂಗ್​ ವದಂತಿ; ನಟಿಯ ಪ್ರತಿಕ್ರಿಯೆ ಹೀಗಿತ್ತು

Pooja Hegde
Published on

ಮುಂಬೈ: ಕನ್ನಡತಿ ಪೂಜಾ ಹೆಗ್ಡೆ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಕಿಸೀ ಕಾ ಭಾಯ್​ ಕಿಸೀ ಕಾ ಜಾನ್​ನಲ್ಲಿ ಅವರು ಸಲ್ಮಾನ್​ ಖಾನ್​ ಜೊತೆ ಕಾಣಿಸಿಕೊಂಡಿದ್ದು ಈ ಬೆನ್ನಲ್ಲೇ ಹೊಸ ವದಂತಿ ಒಂದು ಹುಟ್ಟಿಕೊಂಡಿದೆ.

ಇತ್ತಿಚಿಗೆ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನ ಒಂದರಲ್ಲಿ ಪೂಜಾ ಹೆಗ್ಡೆ ಆ ವದಂತಿಗಳನ್ನು ತಳ್ಳಿ ಹಾಕಿದ್ದು ಈ ಕುರಿತು ನಟಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಐ ಆ್ಯಮ್​ ಸಿಂಗಲ್​

ಇತ್ತೀಚಿನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಸಲ್ಮಾನ್​ ಖಾನ್​ ಅವರನ್ನು ಡೇಟ್​ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡುವ ಮೂಲಕ ವದಂತಿಗಳನ್ನು ಹುಟ್ಟುಹಾಕಲಾಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ನಟಿ ನಾನು ಯಾರನ್ನು ಡೇಟ್​ ಮಾಡುತ್ತಿಲ್ಲ ಐ ಆ್ಯಮ್​ ಸಿಂಗಲ್​ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ನಾನು ಸದ್ಯ ನನ್ನ ವೃತ್ತಿ ಜೀವನದ ಮೇಲೆ ಹೆಚ್ಚಿನ ಗಮನವನ್ನು ಹರಿಸುತ್ತಿದ್ದು ಈ ರೀತಯ ವದಂತಿಗಳಿಗೆ ಕಿವಿಗೊಡಲು ಅಥವಾ ಪ್ರತಿಕ್ರಿಯಿಸಲು ನನ್ನ ಬಳಿ ಸಮಯ ಇಲ್ಲ ಎಂದು ಹೇಳಿದ್ಧಾರೆ.

ವದಂತಿಗೆ ಪುಷ್ಠಿ ನೀಡಿದ ಫೋಟೋಗಳು

ಕಿಸೀ ಕಾ ಭಾಯ್​​ ಕಿಸೀ ಕಾ ಜಾನ್​ ಚಿತ್ರದ ಚಿತ್ರೀಕರಣ ವೇಳೆ ಹೈದರಾಬಾದಿನಲ್ಲಿ ನಡೆದ ನಟಿ ಪೂಜಾ ಹೆಗ್ಡೆ ಅವರ ಸಹೋದರನ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಸಲ್ಮಾನ್​ ಖಾನ್​ ಭಾಗಿಯಾಗಿದ್ದರು.

ಇದಾದ ಬಳಿಕ ಈ ಇಬ್ಬರು ನಟರು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅದಾದ ನಂತರ ಡೇಟಿಂಗ್​ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net