ದೆಹಲಿಯಲ್ಲಿ ಮಲಿನ ದೀಪಾವಳಿ : ವಾಯು ಗುಣಮಟ್ಟ ತೀರಾ ಕಳಪೆ

ದೆಹಲಿಯಲ್ಲಿ ಮಲಿನ ದೀಪಾವಳಿ : ವಾಯು ಗುಣಮಟ್ಟ ತೀರಾ ಕಳಪೆ
Published on: 

ನವದೆಹಲಿ: ರಾಜಧಾನಿ ದೆಹಲಿ ಈ ಬಾರಿ ಐದು ವರ್ಷಗಳಲ್ಲೇ ಅತ್ಯಂತ ಮಲಿನ ದೀಪಾವಳಿ ಕಂಡಿದೆ. ಹಬ್ಬದ ದಿನವಾದ ಭಾನುವಾರ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 376 ದಾಖಲಾಗಿದ್ದು, ಸೋಮವಾರ ಬೆಳಗ್ಗೆ 10 ಗಂಟೆಗೆ 371ಕ್ಕೆ ಇಳಿದರೂ ಪರಿಸ್ಥಿತಿ ಗಂಭೀರವಾಗಿಯೇ ಇದೆ. 2021ರ ನಂತರ ಹಬ್ಬದ ಮರುದಿನ ದಾಖಲಾದ ಅತ್ಯಧಿಕ ಎಕ್ಯೂಐ ಇದಾಗಿದೆ

ದಟ್ಟ ಮಂಜು, ಗೋಚರತೆ ಕುಸಿತ: ಸೋಮವಾರ ಬೆಳಗ್ಗೆ ದೆಹಲಿಯಲ್ಲಿ ದಟ್ಟ ಹೊಗೆಯ ಹೊದಿಕೆಯೇ ಕಂಡುಬಂತು. ಸಫ್ದರ್​ಜಂಗ್​ನಲ್ಲಿ ಬೆಳಗ್ಗೆ 6.30ಕ್ಕೆ ಗೋಚರತೆ ಕೇವಲ 50 ಮೀಟರ್​ಗೆ ಕುಸಿದಿತ್ತು. ಇದಕ್ಕೂ ಹಿಂದಿನ ದಿನ 700 ಮೀಟರ್ ಇತ್ತು. ಪಾಲಂನಲ್ಲಿ 400 ಮೀಟರ್ (ಭಾನುವಾರ 800 ಮೀ.) ದಾಖಲಾಯಿತು. ಒಣ ಹವೆ ಮತ್ತು ಶಾಂತ ಗಾಳಿಯಿಂದ ಮಾಲಿನ್ಯಕಾರಕಗಳು ಚದುರದೆ ಉಳಿದಿವೆ.

ಮಂಜಿನ ಜತೆಗೆ ಹೊಗೆಯೂ ಸೇರಿರುವ ದಟ್ ಸ್ಮಾಗ್ ಆಗಿ ಪರಿವರ್ತನೆಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಹೇಳಿದರು. ಮೇಲ್ವಿಚಾರಣಾ ಕೇಂದ್ರಗಳ ಪೈಕಿ 14 ಕಡೆ ತೀವ್ರ (ಸಿವಿಯರ್), 33 ಕಡೆ ತೀರಾ ಕಳಪೆ, 4 ಕಡೆ ಕಳಪೆ ಮಟ್ಟ ದಾಖಲು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (ಡಿಟಿಯು) ಬಳಿ ಅತ್ಯಧಿಕ 439 ಎಕ್ಯೂಐ ದಾಖಲು ಬವಾನಾ, ಬುರಾರಿ, ಜಹಾಂಗೀರ್​ಪುರಿ, ಸೋನಿಯಾ ವಿಹಾರ್, ಪಂಜಾಬಿ ಬಾಗ್, ಓಖ್ಲಾ, ರೋಹಿಣಿಯಲ್ಲಿ ತೀವ ಮಟ್ಟ ಮುಂದುವರಿದಿದೆ

ನಿರ್ಬಂಧ ಇದ್ದರೂ ಪಟಾಕಿ ಸಿಡಿಸಿದ ಜನರು

ಹಸಿರು ಪಟಾಕಿಗಳನ್ನು ಮಾತ್ರ ನ. 7 ಮತ್ತು 8ರಂದು ಬೆಳಗ್ಗೆ 6ರಿಂದ 7 ಹಾಗೂ ರಾತ್ರಿ 8ರಿಂದ 10 ಗಂಟೆಯ ಅವಧಿಯಲ್ಲಿ ಸಿಡಿಸಲು ಪೂರ್ವ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದ್ದರು. ಆದರೆ ಪಿತಂಪುರ, ಬುರಾರಿ, ಮಯೂರ್ ವಿಹಾರ್ ಮತ್ತು ಲ್ಯೂಟೆನ್ಸ್ ದೆಹಲಿಯ ಕೆಲವೆಡೆ ನಿಗದಿತ ಸಮಯ ಮೀರಿಯೂ ಪಟಾಕಿ ಸಿಡಿಸಿದ್ದು ಕಂಡುಬಂತು. ಪಿತಂಪುರ, ಬುರಾರಿ ಮತ್ತು ಮಯೂರ್ ವಿಹಾರ್​ನಲ್ಲಿ ಪಟಾಕಿ ಅಬ್ಬರ ಹೆಚ್ಚಿತ್ತು.

ಇನ್ನು, ಆಸ್ಪತ್ರೆ, ವೃದ್ಧಾಶ್ರಮ, ಶಿಕ್ಷಣ ಸಂಸ್ಥೆ ಮತ್ತಿತರ ನಿಶ್ಶಬ್ದ ವಲಯಗಳ 300 ಮೀಟರ್ ವ್ಯಾಪ್ತಿಯಲ್ಲಿ ಪಟಾಕಿ ನಿಷೇಧಿಸಲಾಗಿತ್ತು. ಸಿಎಸ್​ಐಆರ್ ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ, ದೆಹಲಿ ಪೊಲೀಸರು ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾರಲು ಅವಕಾಶ ನೀಡಲಾಗಿತ್ತು.