ಸಹಕಾರಿ ಕ್ಷೇತ್ರಕ್ಕೆ ರಾಜಕೀಯ ನುಸುಳದಿರಲಿ

kadagaturu sfcs
ಕೋಲಾರ ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯನ್ನು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಉದ್ಘಾಟಿಸಿದರು. ಸದಸ್ಯರಾದ ಕೆ.ವಿ.ದಯಾನಂದ್​, ರಾಮಚಂದ್ರೇಗೌಡ, ಡೇವಿಡ್​, ಮಂಜುನಾಥ್​ ಇದ್ದರು.
Published on

ಕೋಲಾರ: ರಾಜಕೀಯ ರಹಿತವಾಗಿ ಸಹಕಾರ ಸಂಗಳನ್ನು ನಡೆಸಿದಾಗ ಬಡವರಿಗೆ ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ಇ್ಕೋ ಸಂಸ್ಥೆಯ ನಿರ್ದೇಶಕ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದರು.

ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಗಳಿಂದ ಮಾತ್ರ ರೈತರು, ಮಹಿಳೆಯರ ಸಬಲೀಕರಣ ಸಾಧ್ಯ ಎಂದರು.

ಪ್ರಾಥಮಿಕ ಸಹಕಾರ ಕ್ಷೇತ್ರದಿಂದ ರಾಷ್ಟ್ರೀಯಮಟ್ಟಕ್ಕೆ ಸಹಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ರಾಜಕೀಯ ಕ್ಷೇತ್ರಕ್ಕಿಂತ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯೂ ತೃಪ್ತಿ ತಂದಿದೆ. ಅಂತಾರಾಷ್ಟ್ರೀಯದಿಂದಲೂ ದೇಶ, ರಾಜ್ಯಕ್ಕೆ, ಜಿಲ್ಲೆಗೆ ಸಹಕಾರ ನೀಡಲಾಗುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ರಸ ಗೊಬ್ಬರ ಕೊರತೆ ಎದುರಾಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇ್ಕೋ ಸಂಸ್ಥೆಯಿಂದ ಸಾಧ್ಯವಾದಷ್ಟು ಸರಬರಾಜು ಮಾಡಿಸಲಾಗುತ್ತಿದೆ. ಸೊಸೈಟಿಗಳಿಂದಲೂ ಬೇಡಿಕೆ ಬಂದಷ್ಟು ಪೂರೈಕೆ ಮಾಡಲು ಕ್ರಮವಹಿಸಲಾಗುವುದು ಎಂದರು.

* ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ

ಸಂಘದ ಅಧ್ಯಕ್ಷ ಕೆ.ವಿ.ದಯಾನಂದ ಮಾತನಾಡಿ, ರಾಜಕೀಯ ಹಸ್ತಕ್ಷೇಪ ಇರುವೆಡೆ ಸಹಕಾರ ಸಂಗಳು ನೆಲಕಚ್ಚಿವೆ. ಕಡಗಟ್ಟೂರು ಸೊಸೈಟಿಯಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪಕ್ಕೆ ಬಿಡುವುದಿಲ್ಲ. ಆ ರೀತಿ ಏನಾದರೂ ಆಗಿದ್ದೇ ಆದರೆ ಸ್ಥಾನ ತ್ಯಜಿಸಲೂ ಸಿದ್ಧ. ಯಾವುದೇ ಮುಲಾಜಿಗೆ ಒಳಗಾಗದೆ ಪಾತೀತವಾಗಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಮರುಪಾವತಿ ಆಗುತ್ತಿರುವುದರಿಂದ ಸಂವು ಒಟ್ಟಾರೆಯಾಗಿ 63 ಲಕ್ಷ ರೂ. ಲಾಭಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

* ಬ್ಯಾಂಕ್​ ಪರಿಸ್ಥಿತಿ ಒಕ್ಕೂಟಕ್ಕೆ ಬಾರದಿರಲಿ

ಅಳಿವಿನ ಅಂಚಿನದಲ್ಲಿದ್ದ ಡಿಸಿಸಿ ಬ್ಯಾಂಕ್​ ಸುಧಾರಣೆ ಮಾಡಿ 1500 ಕೋಟಿ ರೂ. ಮೊತ್ತದಷ್ಟು ಸಾಲ ನೀಡಲಾಗಿತ್ತು. ಆಗ ಇದನ್ನು ರಾಜಕೀಯವಾಗಿಯೂ ಲಾಭ ಪಡೆದುಕೊಂಡರು. ಇದರಿಂದ ಬ್ಯಾಂಕ್​ 65 ಕೋಟಿಯಷ್ಟು ರೂ. ಸುಸ್ತಿಯಾಗಲಿದೆ. ಅಂತೆಯೇ ಕೋಮುಲ್​ ಒಕ್ಕೂಟವು ಈಗ ಗೊಂದಲದ ಗೂಡಾಗಿದೆ. ಹೀಗೆ ಮುಂದುವರಿದರೆ ಬ್ಯಾಂಕಿಗೆ ಬಂದ ಪರಿಸ್ಥಿತಿ ಮುಂದೆ ಒಕ್ಕೂಟಕ್ಕೂ ಬರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಸಂಸ್ಥೆಯನ್ನು ನಡೆಸಬೇಕು ಎಂದು ಕೆ.ವಿ.ದಯಾನಂದ ಸಲಹೆ ನೀಡಿದರು.

* ಸ್ವಂತ ಬಂಡವಾಳದಿಂದ ಸಾಲ ಸೌಲಭ್ಯ

ಮಾಜಿ ಸಚಿವ ಶ್ರೀನಿವಾಸಗೌಡ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಯಾರ ಮೇಲೆ ಅವಲಂಬನೆಯಾಗದೆ ಸ್ವಂತ ಬಂಡವಾಳದಿಂದ ಸಾಲ ಸೌಲಭ್ಯ ಕಲ್ಪಿಸುವ ಶಕ್ತಿಯಿದೆ. ಸ್ವಂತ ಬಂಡವಾಳದಿಂದ ಎಸ್​ಎಚ್​ಜಿ, ಬೆಳೆ, ನಿವೇಶನ, ಹುಳ ಮನೆ ಸಾಕಣೆ ಹೀಗೆ ವಿವಿಧ ರೀತಿಯ ಸಾಲಗಳನ್ನು ವಿತರಣೆ ಮಾಡಲಾಗಿದೆ. ಸೊಸೈಟಿಯ ಆರ್ಥಿಕ ಚಟುವಟಿಕೆ ಗಮನಿಸಿದ ರೈತರು ಸ್ವಯಂ ಪ್ರೇರಿತರಾಗಿ ಠೇವಣಿ ಇಟ್ಟಿದ್ದಾರೆ. ಸಾಲ ತೆಗೆದುಕೊಳ್ಳುವುದರ ಜತೆಗೆ ಸೊಸೈಟಿನಲ್ಲಿ ವಹಿವಾಟು ನಡೆಸುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಅಧ್ಯಕ್ಷ ಕೆ.ವಿ.ದಯಾನಂದ ಕೋರಿದರು.

ಉಪಾಧ್ಯಕ್ಷ ಎಂ.ವಿ.ಮಂಜುನಾಥ್​, ನಿರ್ದೇಶಕರಾದ ಎಂ.ಡೇವಿಡ್​, ಬಿ.ಎಂ.ರಾಮೇಗೌಡ, ಎಂ.ಬಯ್ಯಣ್ಣ, ಸಿ.ಡಿ.ರಾಮಚಂದ್ದೇಗೌಡ, ಕುಮಾರ್​ ಆಚಾರಿ, ಸಿ.ಸೋಮಶೇಖರ್​, ಮುನಿಕೃಷ್ಣಪ್ಪ, ಆರ್​.ಸುರೇಶ್​, ಗೋಪಾಲಕೃಷ್ಣಗೌಡ, ರಮೇಶ್​, ನಾರಾಯಣಮ್ಮ, ಎಂ.ನಾರಾಯಣಮ್ಮ, ಮಾಜಿ ನಿರ್ದೇಶಕರಾದ ಲಕ್ಷ$್ಮಣ್​, ವೆಂಕಟೇಶ್​, ನಾರಾಯಣಸ್ವಾಮಿ, ಸಿಇಒ ಮುನೀಶ್ವರಪ್ಪ, ಸಿಬ್ಬಂದಿ ನಾಗೇಶ್​, ಪ್ರಶಾಂತ್​, ಸಿಂಧು ಇದ್ದರು.

ಬಾಕ್ಸ್​...

* ಸಾಲ ವಿತರಣೆ

ಸಭೆಯಲ್ಲಿ ಬೆಳೆ ಸಾಲ 2 ಲಕ್ಷ ರೂ., ನಿವೇಶನ ಅಡಮಾನ 11 ಲಕ್ಷ ರೂ., ಕೃಷಿ ಅಭಿವೃದ್ಧಿ ಸಾಲ 5 ಲಕ್ಷ ರೂ. ಹಾಗೂ ಮಾಧ್ಯಮಾವಧಿ ಸಾಲ (ಕುರಿ ಶೆಡ್​ ನಿರ್ಮಾಣ ಸಾಲ) 4 ಲಕ್ಷ ರೂ. ಸೇರಿ ಒಟ್ಟು 22 ಲಕ್ಷ ರೂ. ಸಾಲ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net