ರಾಜಕಾರಣ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ಒತ್ತಾಯ

3-RNR-04
Published on

ರಾಣೆಬೆನ್ನೂರ: ಕೇಂದ್ರ ಸರ್ಕಾರ ಕುಟುಂಬ ರಾಜಕಾರಣ ನಿಯಂತ್ರಣ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಇಲ್ಲಿಯ ಮಾತೃಭೂಮಿ ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆ ವತಿಯಿಂದ ಉಪ ತಹಸೀಲ್ದಾರ್​ ಶ್ಯಾಮಸುಂದರ ಗೊರವರ ಮೂಲಕ ಸೋಮವಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಲ್ಲ ಚುನಾವಣೆಯಲ್ಲಿ ಒಂದು ಕುಟುಂಬದಿಂದ ಒಬ್ಬ ಸದಸ್ಯರು ಮಾತ್ರ ಸ್ಪಧಿರ್ಸುವಂತೆ ಕಡ್ಡಾಯಗೊಳಿಸಬೇಕು. ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ ಪದವಿ ವಿದ್ಯಾರ್ಹತೆ ಕಡ್ಡಾಯಗೊಳಿಸಬೇಕು. ಭಾರತದಲ್ಲಿ ಎಲ್ಲ ಪ್ರಜೆಗಳಿಗೆ ಮತದಾನ ಕಡ್ಡಾಯಗೊಳಿಸಬೇಕು. ಚುನಾವಣೆಗೆ ಸ್ಪಧಿರ್ಸಲು ಗರಿಷ್ಠ ವಯೋಮಿತಿ ಕಡ್ಡಾಯಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸಂಸ್ಥೆಯ ಪ್ರಮುಖರಾದ ಮಲ್ಲಿಕಾರ್ಜುನ ತೆಗ್ಗಿನ, ಶಿವು ಕಡೂರ, ಸೋಮರೆಡ್ಡಿ ಹಾದಿಮನಿ, ಮಲ್ಲಿಕಾರ್ಜುನ ಅಡಿವೆಪ್ಪನವರ, ದೊಡ್ಡಬಸಪ್ಪ ಕೊಪ್ಪದ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net