

Chhangur Baba: ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಎಂದೇ ಕುಖ್ಯಾತನಾಗಿರುವ ಛಂಗೂರ್ ಬಾಬಾ ಅಲಿಯಾಸ್ ಜಮಾಲುದ್ದೀನ್ ಬಂಧನದ ಬಳಿಕ ನಡೆಯುತ್ತಿರುವ ತನಿಖೆಯಲ್ಲಿ 'ರೆಡ್ ಡೈರಿ' ಲಭ್ಯವಾಗಿದ್ದು, ಅದರಲ್ಲಿ ಹಲವಾರು ರಾಜಕಾರಣಿಗಳು ಮತ್ತು ಮಾಜಿ ಅಧಿಕಾರಿಗಳ ಹೆಸರುಗಳು ಉಲ್ಲೇಖಗೊಂಡಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದೇಶದ ಅಭಿವೃದ್ದಿಗೆ ದಿಕ್ಸೂಚಿ
ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ದಾಳಿಯ ವೇಳೆ ವಶಪಡಿಸಿಕೊಂಡ ಡೈರಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, 2022ರ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಛಂಗೂರ್ ಬಾಬಾನಿಂದ ಹಣಕಾಸಿನ ಬೆಂಬಲ ಪಡೆದಿದ್ದಾರೆ ಎಂದು ಹೇಳಲಾದ ರಾಜಕಾರಣಿಗಳು ಮತ್ತು ಮಾಜಿ ಅಧಿಕಾರಿಗಳ ಹೆಸರಿರುವುದಾಗಿ ಮೂಲಗಳು ತಿಳಿಸಿವೆ.
ಎಟಿಎಸ್, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಇಡಿ ಸೇರಿದಂತೆ ಹಲವಾರು ಸಂಸ್ಥೆಗಳು ಈ ಡೈರಿಯ ಮೇಲೆ ಹೆಚ್ಚು ಗಮನ ಹರಿಸಿದ್ದು, ಇದು ಛಂಗೂರ್ ಬಾಬಾನ 106 ಕೋಟಿ ರೂ.ಗಳ ವಿದೇಶಿ ದೇಣಿಗೆಯ ಮೂಲವನ್ನು ಕೆದಕಲು ನೆರವಾಗಲಿದೆ ಎನ್ನುವುದು ತನಿಖಾಧಿಕಾರಿಗಳ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: ಕಲಾವಿದರ ಶ್ರಮದಿಂದ ಕಲೆಗಳ ಆರಾಧನೆ
ಡೈರಿಯಲ್ಲಿ 2022ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಉತ್ರೌಲಾ ಕ್ಷೇತ್ರದ ಅಭ್ಯರ್ಥಿಗೆ 90 ಲಕ್ಷ ರೂ.ಗಳನ್ನು ಪಾವತಿಸಿರುವ ಬಗ್ಗೆ ನಮೂದಾಗಿದೆ. ಆ ಚುನಾವಣೆಯಲ್ಲಿ ಅಭ್ಯರ್ಥಿ ಸೋತರೂ, ಛಂಗೂರ್ ಬಾಬಾ 2027ರ ಚುನಾವಣೆಯಲ್ಲಿ ಅದೇ ಸ್ಥಾನದಿಂದ ಮತ್ತೊಬ್ಬ ಮಾಜಿ ಐಪಿಎಸ್ ಅಧಿಕಾರಿಯನ್ನು ಬೆಂಬಲಿಸಲು ಯೋಜಿಸುತ್ತಿದ್ದರು ಎನ್ನುವುದನ್ನು ಈ ಡೈರಿಯಲ್ಲಿ ಸೂಚಿಸಲಾಗಿದೆ.
ಛಂಗೂರ್ ಬಾಬಾ ಹಲವಾರು ವರ್ಷಗಳಿಂದ ಬಲರಾಂಪುರ ಸೇರಿದಂತೆ ನೆರೆಯ ಕ್ಷೇತ್ರಗಳಾದ್ಯಂತ ರಾಜಕೀಯ ಪ್ರಚಾರಗಳಿಗೆ ಹಣ ನೀಡಿದ್ದಾನೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ,ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ಹಣಕಾಸು ಒದಗಿಸುವುದಷ್ಟೇ ಅಲ್ಲದೆ, ಸಾಮೂಹಿಕವಾಗಿ ಮತ ಚಲಾಯಿಸುವಂತೆ ತನ್ನ ಬೆಂಬಲಿಗರಿಗೆ ಸೂಚಿಸುತ್ತಿದ್ದನೆಂದು ಮೂಲಗಳಿಂದ ತಿಳಿದು ಬಂದಿದೆ,(ಏಜೆನ್ಸೀಸ್).