ಇನ್ಮುಂದೆ ಗಲಭೆಯಾಗದಂತೆ ನೋಡಿಕೊಳ್ತೇವೆ: ಗೃಹ ಸಚಿವ ಅರಗ ಜ್ಞಾನೇಂದ್ರ

Araga jnanendra
Published on

ಶಿವಮೊಗ್ಗ: ಧರ್ಮದ ವಿಷಯದಲ್ಲಿ ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಗಲಭೆ ಆಗಿದೆ.ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಗಲಭೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಒಂದೊಂದು ರಾಜ್ಯಕ್ಕು ಒಂದೊಂದು ರೀತಿ ಕಾನೂನು ಇರುತ್ತದೆ.ಸಂದರ್ಭ ಹಾಗೂ ಪ್ರಕರಣಕ್ಕೆ ಅನುಗುಣವಾಗಿ ಪೊಲೀಸರು ನಿರ್ಧಾರ ಕೈಗೊಳ್ಳುತ್ತಾರೆ.ನಾವು ಹಾಗೆ ಮಾಡಿ, ಹೀಗೆ ಮಾಡಿ, ಈ ಸೆಕ್ಷನ್ ಹಾಕಿ ಅಂತಾ ಹೇಳಲು ಆಗಲ್ಲ ಎಂದರು.

ಶಿವಮೊಗ್ಗದಲ್ಲಿ ಮತ್ತೊಂದು ಕೋಮು ಗಲಭೆ ತಪ್ಪಿಸಿದ ಪೊಲೀಸರ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ಕೂಡಾ ಕೇಳಿದ್ದೇನೆ.‌ ಯಾರನ್ನೋ ಕೊಲೆ ಮಾಡುವ ಸಂಚು ರೂಪಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಅವರ ಮೇಲೆ ಮೊಕದ್ದಮೆ ಹೂಡಿದ್ದಾರೆ.ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net