

ಹಾವೇರಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕವೇ ಕಾಗಿರ್ಲ್ ವಿಜಯೋತ್ಸವ ಆಚರಿಸಬೇಕು. ಯುದ್ಧ ಗೆಲುವು ಮಾತ್ರವಲ್ಲ ಸಾವಿನ ಮಾರಣ ಹೋಮವೂ ಆಗಿರುತ್ತದೆ. ಕಾಗಿರ್ಲ್ ಹೋರಾಟದಲ್ಲಿ ನೂರಾರು ಸೈನಿಕರು ಹುತಾತ್ಮರಾಗಿದ್ದಾರೆ. ಇಂದು ನಾವು ಎಲ್ಲ ಸಮಸ್ಯೆಗಳನ್ನು ಮನುಷ್ಯ ಪ್ರೀತಿಯಿಂದಲೇ ಗೆಲ್ಲುವಂತಾಗಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ಪೊಲೀಸ್ ಅಧೀಕರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾಗಿರ್ಲ್ ವಿಜಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿರು.
ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ. ಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಕಾಗಿರ್ಲ್ ಯೋಧ ಮಹ್ಮದ್ ಜಹಾಂಗೀರ ಖವಾಸ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಪಿ.ಸಿ. ಹಿರೇಮಠ, ಕಚೇರಿ ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ ಹಾಗೂ ಸಿಬ್ಬಂದಿ ಇದ್ದರು.