

Python: ಹೆಬ್ಬಾವನ್ನು ಕೊಂದು ಅದರ ಮಾಂಸವನ್ನು ಬೇಯಿಸಿದ ಆರೋಪದ ಮೇಲೆ ಕೇರಳದ ಕೊಚ್ಚಿ ಸಮೀಪದ ಪಣಪುಳದ ಪ್ರದೇಶದಲ್ಲಿ ಗುರುವಾರ(ಸೆ.11) ಅರಣ್ಯ ಅಧಿಕಾರಿಗಳು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಪ್ರಮೋದ್ ಮತ್ತು ಬಿನೀಶ್ ಬಂಧಿತ ಆರೋಪಿಗಳು. ಇಬ್ಬರೂ ಬುಧವಾರ ಸಂಜೆ ತಮ್ಮ ಮನೆಗಳ ಸಮೀಪದ ರಬ್ಬರ್ ತೋಟದಿಂದ ಹೆಬ್ಬಾವನ್ನು ಬೇಟೆಯಾಡಿ, ನಂತರ ಪ್ರಮೋದ್ ಅವರ ಮನೆಯಲ್ಲಿ ಸರೀಸೃಪವನ್ನು ಕೊಂದು ತಿನ್ನಲು ಕರ್ರಿ ತಯಾರಿಸಿದ್ದರು.
ಖಚಿತ ಮಾಹಿತಿ ಮೇರೆಗೆ ಥಳಿಪರಂಬ ರೇಂಜ್ ಆಫೀಸರ್ಸ್ ತಂಡ ಮನೆಯ ಮೇಲೆ ದಾಳಿ ನಡೆಸಿ, ಹಾವಿನ ಭಾಗಗಳು ಮತ್ತು ಬೇಯಿಸಿದ ಖಾದ್ಯವನ್ನು ವಶಪಡಿಸಿಕೊಂಡಿದೆ. "ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)