ಪೊಲೀಸ್​ ಠಾಣೆಗೇ 'ಬೇಡಿ' ಹಾಕಿದ್ರು! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ...

police station
Published on

ಧಾರವಾಡ: ಪೊಲೀಸ್​ ಠಾಣೆಗೇ 'ಬೇಡಿ' ಹಾಕಿ ಬಾಗಿಲು ಬಂದ್​ ಮಾಡಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ಅಷ್ಟಕ್ಕೂ ಈ 'ಬೇಡಿ'ಯನ್ನು ಹಾಕುವ ದುಸ್ಥಿತಿ ತಂದೊಡ್ಡಿರೋದು ಕೋವಿಡ್​ ಸೋಂಕು.

ನಗರದ ಶಹರ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದ್ದು, ಮುಖ್ಯ ದ್ವಾರ ಮುಚ್ಚಲಾಗಿದೆ. ವಿಶೇಷ ಎಂದರೆ, ಈ ದ್ವಾರಕ್ಕೆ ಬೀಗದ ಬಲದು ಬೇಡಿ ಹಾಕಲಾಗಿದೆ. ಇದನ್ನೂ ಓದಿರಿ ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

ಕರ್ತವ್ಯನಿರತ ಮಹಿಳಾ ಮುಖ್ಯ ಪೇದೆಗೆ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಠಾಣೆಯ ಒಳ ಮತ್ತು ಹೊರಭಾಗದಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ.

ಶನಿವಾರ ಮತ್ತಷ್ಟು ಜಾಗೃತರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ, ಮುಖ್ಯ ಬಾಗಿಲಿಗೆ ಬೇಡಿ ಹಾಕಿ ಬಂದ್​ ಮಾಡಿದರು. ಠಾಣೆಯನ್ನು ತಾತ್ಕಾಲಿಕವಾಗಿ ಎದುರಿನ ಸಂದರ್ಶಕರ ಕೊಠಡಿಗೆ ಸ್ಥಳಾಂತರ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಅಪರಾಧಿಗಳ ಕೈಗೆ ಹಾಕುವ ಬೇಡಿಯನ್ನು ಠಾಣೆಯ ಬಾಗಿಲಿಗೆ ಹಾಕಿರುವುದು ಸಾರ್ವಜನಿಕರನ್ನು ಹುಬ್ಬೇರುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net