VIDEO: ಕಳ್ಳಬಟ್ಟಿ ಸಂಗ್ರಹ ಮಾಡಿಟ್ಟ ಜಾಗ ನೋಡಿ ಕಂಗಾಲಾದ ಪೊಲೀಸರು..ಅಷ್ಟಕ್ಕೂ ಆ ಮನೆಯಲ್ಲಿ ಎಲ್ಲಿದ್ವು ಗೊತ್ತಾ ಮದ್ಯದ ಬಾಟಲಿಗಳು..?

Kallabatti 27 april 20
Published on

ಬಾಗಲಕೋಟೆ: ಲಾಕ್​ಡೌನ್​ನಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಆದರೆ ಎಣ್ಣೆಪ್ರಿಯರಿಗೆ ಸ್ವಲ್ಪ ಜಾಸ್ತಿಯೇ ಸಮಸ್ಯೆಯಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಬಾರ್​, ರೆಸ್ಟೊರೆಂಟ್​ಗಳಿಗೆ ಕನ್ನ ಹಾಕಿದ ಪ್ರಕರಣ ನಡೆದಿದೆ. ಕೆಲವರು ಮನೆಯಲ್ಲೇ ಮದ್ಯ ತಯಾರಿಸಲು ಪ್ರಯತ್ನಿಸಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಆದರೆ ಈಗ ಒಂದು ವಿಚಿತ್ರ ಪ್ರಕರಣ ನಡೆದಿದೆ. ಕಳ್ಳಬಟ್ಟಿಕೋರರ ಈ ಖತರ್ನಾಕ್​ ಐಡಿಯಾ ನೋಡಿ ಪೊಲೀಸರೇ ಕಂಗಾಲಾಗಿದ್ದಾರೆ.

ಬಾಗಲಕೋಟೆಯ ಹೊರವಲಯದಲ್ಲಿ ಒಂದು ಮನೆಯಿದೆ. ಆ ಮನೆಯಲ್ಲಿ ಕಳ್ಳಬಟ್ಟಿ ಸಂಗ್ರಹ ಮಾಡಲಾಗಿದೆ ಎಂಬ ಖಚಿತ ಮಾಹಿತಿಯೇನೋ ಪೊಲೀಸರಿಗೆ ಸಿಕ್ಕಿತು. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ಹೋಗಿ ದಾಳಿ ಮಾಡಿದರೆ ಕಳ್ಳಬಟ್ಟಿ ಮದ್ಯ ಸುಲಭಕ್ಕೆ ಸಿಗಲಿಲ್ಲ.

ಬಾಟಲಿಗಳನ್ನು ಹೇಗೆ ಇಟ್ಟಿದ್ದರೆಂದರೆ ಅದನ್ನು ತೆಗೆಯುವಷ್ಟರಲ್ಲಿ ಪೊಲೀಸರಿಗೆ ಸಾಕುಸಾಕಾಯ್ತು. ಅಡುಗೆ ಮನೆಯ ಗ್ಯಾಸ್​ಸಿಲೆಂಡರ್​ ಅಡಿಯಲ್ಲಿ ಇರುವ ಟೈಲ್ಸ್​ ತೆಗೆದರೆ ಅಲ್ಲೊಂದು ಕಂದಕ. ಆ ಕಂದಕದಲ್ಲಿ ಬರೋಬ್ಬರಿ 50 ಲೀಟರ್​ಗೂ ಅಧಿಕ ಕಳ್ಳಬಟ್ಟಿ ಮದ್ಯ ಇರುವ ಬಾಟಲಿಗಳು ಪತ್ತೆಯಾಗಿವೆ. ಆ ಬಾಟಲಿಗಳನ್ನು ವಶಕ್ಕೆ ಪಡೆದ ಪೊಲೀಸರು, ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net