'ಮಾಸ್ಕ್ ಯಾಕೆ ಧರಿಸಿಲ್ಲ- ಕಟ್ಟಿದಂಡ' ಎನ್ನತೊಡಗಿದ್ದಾರೆ ಮಾರ್ಷಲ್​ಗಳು

raid
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೋವಿಡ್​-19 ಪಿಡುಗು ಜೋರಾಗಿದ್ದರೂ, ಮಾಸ್ಕ್​ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳುವುದು ಸೇರಿ ವಿವಿಧ ಸುರಕ್ಷತಾ ಕ್ರಮಗಳನ್ನು ಪಾಲಿಸದ ಆರೋಪದಲ್ಲಿ ಬೆಂಗಳೂರು ನಗರ ಉತ್ತರ ವಿಭಾಗದ ಪೊಲೀಸರು ಶನಿವಾರ 8ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿದರು.

ಅರ್​.ಟಿ. ನಗರ ಮತ್ತು ಸಂಜಯನಗರದ ಸುತ್ತಮುತ್ತಲ ಪ್ರದೇಶಗಳ ಮದ್ಯದಂಗಡಿಗಳು, ಬಟ್ಟೆಅಂಗಡಿಗಳು ಸೇರಿ 8ಕ್ಕೂ ಹೆಚ್ಚು ಅಂಗಡಿಗಳ ಮೇಲೆ ಬಿಬಿಎಂಪಿಯ ಮಾರ್ಷಲ್​ಗಳೊಂದಿಗೆ ಪೊಲೀಸರು ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾಸ್ಕ್​ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ, ಸ್ಯಾನಿಟೈಸರ್​ ವ್ಯವಸ್ಥೆ ಇಲ್ಲದೇ ವ್ಯಾಪಾರ ವಹಿವಾಟು ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಮತ್ತು ಮಾರ್ಷಲ್​ಗಳ ತಂಡ ಅಲ್ಲಿದ್ದ ಗ್ರಾಹಕರು ಹಾಗೂ ಅಂಗಡಿಗಳ ಮಾಲೀಕರಿಗೆ ಜುಲ್ಮಾನೆ ವಿಧಿಸಿದರು.

ಶುಕ್ರವಾರ ಸಂಜೆ ಕೂಡ ಉತ್ತರ ವಿಭಾಗದ ಪೊಲೀಸರು ಮಲ್ಲೇಶ್ವರದ ಸುತ್ತಮುತ್ತಲಿನ ಚಿನ್ನಾಭರಣ ಮಳಿಗೆಗಳು, ಮದ್ಯದಂಗಡಿಗಳು ಸೇರಿ 8ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ಮಾಡಿದ್ದರು. ಅಲ್ಲದೆ, ಶನಿವಾರ ಬೆಳಗ್ಗೆ ಟ್ವೀಟ್​ ಮಾಡಿದ್ದ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ರಾವ್​, ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದರೆ ಪೊಲೀಸರು ದಾಳಿ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net