

ಭುವನೇಶ್ವರ: ಇಲ್ಲಿಗೆ ಸಮೀಪದ ಬಿರ್ಮಿತ್ರಾಪುರ ಪೊಲೀಸ್ ಠಾಣೆಯ ಉಸ್ತುವಾರಿ ಹೊತ್ತಿದ್ದ ಇನ್ಸ್ಪೆಕ್ಟರ್ ಆನಂದ್ ಚಂದ್ರ ಮಾಂಝಿ ತನ್ನ ನಾಲ್ವರು ಸಹಚರರ ಜತೆಗೂಡಿ 13 ವರ್ಷದ ಬಾಲೆಯ ಮೇಲೆ ನಾಲ್ಕು ತಿಂಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಆಕೆ ಗರ್ಭ ಧರಿಸಿದ್ದ ವಿಷಯ ತಿಳಿದು ಗಭಪಾತವನ್ನೂ ಮಾಡಿಸಿದ್ದರು.
ಈ ವಿಷಯ ಬಹಿರಂಗಗೊಳ್ಳುತ್ತಲೇ ತಪ್ಪು ತಮ್ಮದಲ್ಲ ಎಂದು ಹೇಳಿಕೊಂಡು ಆನಂದ್ ಚಂದ್ರ ಮಾಂಝಿ ಆರೋಪದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಇದಾವುದನ್ನೂ ಪರಿಗಣಿಸದೆ ಒಡಿಶಾ ಡಿಜಿಪಿ ಅಭಯ್ ಪ್ರಕರಣದ ತನಿಖೆಗೆ ಆದೇಶಿಸಿದ್ದರು.
ಇದನ್ನೂ ಓದಿ: ಪ್ರತಿ ಸೆಕೆಂಡ್ಗೆ 3 ಲೆಕ್ಕಗಳನ್ನು ಬಿಡಿಸುವ 10ರ ಪೋರ!
ಈ ಹಿನ್ನೆಲೆಯಲ್ಲಿ ಸುಂದರ್ಗಢ ಜಿಲ್ಲೆಯ ಬಿರ್ಮಿತ್ರಾಪುರ ಮತ್ತು ರಾಯ್ಬೋಗಾ ಪೊಲೀಸ್ ಠಾಣೆಗಳಿಗೆ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸಿಬಿ ತಂಡ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ಆನಂದ್ ಚಂದ್ರ ಮಾಂಝಿ ಮತ್ತು ಅವರ ನಾಲ್ಚರು ಸಹಚರರು ಬಾಲೆಯ ಮೇಲೆ ಅತ್ಯಾಚಾರ ಮಾಡಿ, ಆಕೆ ಗರ್ಭ ಧರಿಸಿದಾಗ ಗರ್ಭಪಾತ ಮಾಡಿಸಿದ್ದು ಖಚಿತವಾಯಿತು.
ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಡಿಜಿಪಿ ಅಭಯ್ ಇದೀಗ ಆನಂದ್ ಚಂದ್ರ ಮಾಂಝಿ ಅವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಜತೆಗೆ ಸಂತ್ರಸ್ತೆಯ ಬಳಿ ಕ್ಷಮೆ ಕೋರಿದ್ದಾರೆ. ಗರ್ಭಪಾತ ಮಾಡಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನೂ ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ.