ಲಾಕ್​ಡೌನ್​ ಗಂಭೀರತೆಯೇ ಅರ್ಥವಾಗುತ್ತಿಲ್ಲ ಕೆಲವರಿಗೆ: ಮನೆಯಿಂದ ಹೊರಬಂದು ಕ್ರಿಕೆಟ್​ ಆಡಿದ ಯುವಕರು, ಭರ್ಜರಿ ಬ್ಯಾಟಿಂಗ್​ ಮಾಡಿದ ಪೊಲೀಸರು

Police 26 March 20
Published on

ಗದಗ: ಮಾರಣಾಂತಿಕ ಕರೊನಾ ವೈರಸ್​ ನಿಯಂತ್ರಣ ಮಾಡುವ ದೃಷ್ಟಿಯಿಂದ ಭಾರತವನ್ನು ಲಾಕ್​ಡೌನ್​ ಮಾಡಲಾಗಿದೆ. 21ದಿನ ಯಾರೂ ಮನೆಯಿಂದ ಹೊರಬರಬೇಡಿ ಎಂದು ಸರ್ಕಾರ ಆದೇಶ ನೀಡಿದೆ.

ಆದರೆ ಹಲವರು ಇದನ್ನು ಪಾಲಿಸುತ್ತಿಲ್ಲ. ಮನೆಯಿಂದ ಹೊರ ಹೋಗೋದು, ಗುಂಪುಕಟ್ಟಿಕೊಂಡು ಮಾತಾಡೋದು, ಅಗತ್ಯ ವಸ್ತುಗಳ ಖರೀದಿಗೆ ಬೀದಿಗೆ ಇಳಿಯೋದು ಸಾಮಾನ್ಯ ಆಗಿಬಿಟ್ಟಿದೆ.

ಹೀಗೆ ಬೀದಿಗೆ ಇಳಿಯುವವರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡುತ್ತಿದ್ದಾರೆ. ಈ ಮಧ್ಯೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಒಂದಷ್ಟು ಯುವಕರು ಗುಂಪುಕಟ್ಟಿಕೊಂಡು ಕ್ರಿಕೆಟ್​ ಆಡುತ್ತಿದ್ದರು. ಅಲ್ಲಿಗೆ ತೆರಳಿದ ಪೊಲೀಸರು ಯುವಕರ ಮೇಲೆ ಲಾಠಿ ಬೀಸಿದ್ದಾರೆ. ಅವರ ಕೈಯಲ್ಲಿದ್ದ ಬ್ಯಾಟ್​ ಕಸಿದು, ಹೊಡೆದು ಮನೆಗೆ ಅಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net