

ರಾಣೆಬೆನ್ನೂರ: ನಗರದ ರೈಲ್ವೆ ನಿಲ್ದಾಣದ ರಸ್ತೆ ಬಳಿ ನಿಮಿರ್ಸುತ್ತಿರುವ ಪೊಲೀಸ್ ವಸತಿ ಗೃಹ ಕಟ್ಟಡ ಕಾಮಗಾರಿಯಲ್ಲಿ ಕಳಪೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಸ್ವತಃ ದಾವಣಗೆರೆ ಐಜಿಪಿ ತನಿಖೆ ನಡೆಸಲು ಆದೇಶಿಸಿದ್ದಾರೆ.
ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ 12 ಮನೆಗಳಂತೆ 2 ವಸತಿ ಕಟ್ಟಡ ನಿಮಿರ್ಸಲಾಗುತ್ತಿದೆ. ಆದರೆ, ಕಟ್ಟಡಕ್ಕೆ ಬಳಸುತ್ತಿರುವ ಕಬ್ಬಿಣ ತುಕ್ಕು ಹಿಡಿದು ಹೋಗಿದ್ದು ಅವುಗಳನ್ನೆ ಬಳಸಲಾಗುತ್ತಿದೆ.
ಕಟ್ಟಡದ ಗೋಡೆಗಳಿಗೆ ಒಂದು ಕಡೆಯಿಂದ ಗಿಲಾವ್ ಮಾಡುತ್ತ ಬರುತ್ತಿದ್ದರೆ ಮತ್ತೊಂದು ಕಡೆಯಿಂದ ಬಣ್ಣ ಹಚ್ಚಲಾಗುತ್ತಿದೆ. ಕ್ಯೂರಿಂಗ್ಗೂ ಸಮಯ ಕೊಡುತ್ತಿಲ್ಲ. ಅಲ್ಲದೆ ಬಹಳಷ್ಟು ಕಡೆಗಳಲ್ಲಿ ಈಗಾಗಲೇ ಕಟ್ಟಡ ಬಿರುಕು ಬಿಟ್ಟಿದೆ. ಆದ್ದರಿಂದ ಕಟ್ಟಡ ಕಾಮಗಾರಿ ಕಳಪೆಯಾಗುತ್ತಿದೆ ಎಂದು ಆರೋಪಿಸಿ ನಗರಸಭೆ ಮಾಜಿ ಉಪಾಧ್ಯೆ ಕಸ್ತೂರಿ ಚಿಕ್ಕಬಿದರಿ ದಾವಣಗೆರೆ ಐಜಿಪಿ ಅವರಿಗೆ ದೂರು ನೀಡಿದ್ದಾರೆ.
ತನಿಖೆಗೆ ಆದೇಶ...
ಕಟ್ಟಡ ಕಾಮಗಾರಿ ಕಳಪೆಯಾಗಿರುವ ಕುರಿತು ನಗರಸಭೆ ಮಾಜಿ ಉಪಾಧ್ಯೆ ಕಸ್ತೂರಿ ಚಿಕ್ಕಬಿದರಿ ೋಟೊ ಸಮೇತ ದೂರು ನೀಡಿರುವ ಹಿನ್ನೆಲೆಯಲ್ಲಿ ದಾವಣಗೆರೆ ಐಜಿಪಿ ರವಿ ಕಾಂತೇಶಗೌಡ, ಕಟ್ಟಡ ನಿರ್ಮಾಣದ ಕಾಮಗಾರಿಯಲ್ಲಿ ಮೇಲ್ನೋಟಕ್ಕೆ ಕಳಪೆ ಕಂಡು ಬಂದಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಸ್ಪಿ ಅಂಶಕುಮಾರ ಅವರಿಗೆ ಆದೇಶಿಸಿದ್ದಾರೆ.