

ಬೊಮ್ಮನಹಳ್ಳಿ: SSLC ಪರೀಕ್ಷೆಯಲ್ಲಿ ಫೇಲ್ ಆದರೆ ಆಗುವ ಅವಮಾನ ಅಂತಿಂಥದ್ದಲ್ಲ. ಒಂದು ವಿಷಯದಲ್ಲಿ ಅನುತ್ತೀರ್ಣರಾದರೂ ಹಣೆಪಟ್ಟಿ ಮಾತ್ರ ಖಂಡಿತವಾಗಿಯೂ ಬಿದ್ದೇ ಬೀಳುತ್ತದೆ. ಈ ಸಂದರ್ಭ ವಿದ್ಯಾರ್ಥಿಗಳೂ ಮಾನಸಿಕವಾಗಿ ಕುಗ್ಗಿರುತ್ತಾರೆ. ಬೊಮ್ಮನಹಳ್ಳಿಯ ಬಂಡೇಪಾಳ್ಯ ಪೊಲೀಸರು ಮಾತ್ರ ಫೇಲ್ ಆದ ವಿಧ್ಯಾರ್ಥಿಗಳಿಗೆ ಆಸರೆಯಾಗಿದ್ದು ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ.
ಬೊಮ್ಮನಹಳ್ಳಿಯ ಬಂಡೇಪಾಳ್ಯದ ಪೊಲೀಸರು SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿಧ್ಯಾರ್ಥಿಗಳನ್ನು ಗುರುತಿಸಿ ಉಚಿತ ಟ್ಯೂಷನ್ ವ್ಯವಸ್ಥೆ ಮಾಡಿದ್ದಾರೆ. ಇವರು 20 ದಿನಗಳ ಕಾಲ 65 ವಿದ್ಯಾರ್ಥಿಗಳಿಗೆ ಟ್ಯೂಷನ್ ವ್ಯವಸ್ಥೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿದಿನವೂ ಎಲ್ಲಾ ಆರು ಸಬ್ಜೆಕ್ಟ್ಗನ್ನು ಪಾಠ ಮಾಡಲು ತರಗತಿ ವ್ಯವಸ್ಥೆಯನ್ನು ಪೊಲೀಸರು ಮಾಡಿಸಿಕೊಟ್ಟಿದ್ದಾರೆ. ತರಗತಿಗಳಲ್ಲಿ ನುರಿತ ಶಿಕ್ಷಕರಿಂದ ತರಬೇತಿ ನೀಡಿಸಿದ್ದು, ಒಟ್ಟು 35 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಪೊಲೀಸರು ನಗರದ ಶೊಬೋದಿನ ಶಾಲೆಯಲ್ಲಿ ಪ್ರತಿ ದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆರಕ್ಕೆ ಆರೂ ಸಜ್ಬೆಕ್ಟ್ ಫೇಲ್ ಆಗಿದ್ದ ಸಿದ್ದಿಕ್ ಎಂಬ ವಿದ್ಯಾರ್ಥಿ ಕೂಡ ತೇರ್ಗಡೆಯಾಗಿದ್ದಾನೆ. ಈ ಹಿನ್ನೆಲೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು ಬಂಡೆ ಪಾಳ್ಯ ಠಾಣೆ ಎದುರು ತೇರ್ಗಡೆ ಹೊಂದಿದ ವಿಧ್ಯಾರ್ಥಿಗಳು ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭ ವಿಧ್ಯಾರ್ಥಿಗಳಿಗೂ ಸನ್ಮಾನಿಸಿ ಗೌರವಿಸಲಾಗಿದೆ.
ಬಂಡೆಪಾಳ್ಯ ಸಿಪಿಐ ಎಲ್.ವೈ.ರಾಜೇಶ್ ಹಾಗೂ ತಂಡ, ರಾಜಲಾಂಚನ ಸಂಸ್ಥೆ ಹಾಗೂ ದರ್ಪಣ ಸಂಸ್ಥೆ ಸಹಭಾಗಿತ್ವದಲ್ಲಿ ಈ ಉತ್ತಮ ಕಾರ್ಯವನ್ನು ನಡೆಸಲಾಗಿತ್ತು.