ಪೊಲೀಸ್​, ಅಬಕಾರಿ, ಪಿಡಬ್ಲ್ಯುಡಿ ಅಧಿಕಾರಿಗಳು ತಾಲೂಕಿನಿಂದ ತೊಲಗಿ

Srinivaspur
ಕನಕದಾಸರ ಜಯಂತ್ಯತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡಿ ಪ್ರತಿಭಾ ಪುರಸ್ಕಾರ ನೀಡಿದರು.
Published on

ಶ್ರೀನಿವಾಸಪುರ: ಸಂತ ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ, ಸಮಾಜದಲ್ಲಿನ ಮೇಲುಕೀಳನ್ನು ತೊರೆದು ಸರ್ವರಲ್ಲಿ ಆಧ್ಯಾತ್ಮಿಕ ನೆಮ್ಮದಿಗೆ ತಳಪಾಯ ಹಾಕಿದ ಮಾನವತಾವಾದಿಯಾಗಿದ್ದಾರೆ. ಅಂಥವರ ಜಯಂತಿಗೆ ಬಾರದ ಪೊಲೀಸ್​, ಅಬಕಾರಿ, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಮೊದಲು ತಾಲೂಕಿನಿಂದ ತೊಲಗಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಚ್ಚರಿಕೆ ನಿಡಿದರು.

ಪಟ್ಟಣದ ಕನಕ ಸಮುದಾಯ ಭವನದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಹಾಗೂ ಕುರುಬ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರ ಹಾಕಿದ ಅವರು, ಕನಕದಾಸರು ಮಾನವರ ಹಿತಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು. ನಾನಾ ಅಪಮಾನಗಳಿಗೆ ಗುರಿಯಾಗಿ ಜೀವನ ಸವೆಸಿದವರು. ವಿದ್ಯಾರ್ಥಿಗಳು ದಾಸರ ಬಗ್ಗೆ ಅಧ್ಯಯನ ಮಾಡಿ ಜೀವನ ವಿಧಾನ, ಬದ್ಧತೆ,ಲಕ್ಷ$್ಯ ಬೆಳೆಸಿಕೊಂಡು ಜ್ಞಾನವಂತರಾಗಿ ಎಂದರು.

ನಿವೃತ್ತ ಮುಖ್ಯಶಿಕ್ಷಕಿ ಕೆ.ಭಾಗ್ಯಲಕ್ಷಿ$್ಮ ಮಾತನಾಡಿ, ಬೀರಪ್ಪ ನಾಯಕನ ಮಗ ಪಾಳೆಗಾರಿಕೆ ಕುಟುಂಬದಲ್ಲಿ ಜನಿಸಿದ ಕನಕದಾಸರು ದೇವಾಲಯ ನಿಮಾರ್ಣ ಕಾಲದಲ್ಲಿ ಭೂಮಿಯಲ್ಲಿ ಸಿಕ್ಕಿದ ನಿಧಿಯನ್ನು ಸಮಾಜೋದ್ಧಾರ ಕಾರ್ಯಗಳಿಗೆ ನೀಡಿ ಜೀವನ ಮುಡಿಪಿಟ್ಟು, ಆಧ್ಯಾತ್ಮಿಕ, ಸಾಮಾಜಿಕ, ಭಾವನಾತ್ಮಕ ಅಸ್ಪಶ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ನಾಡಿನುದ್ದಗಲಕ್ಕೂ ಸಂಚರಿಸಿ ಜನರನ್ನು ಎಚ್ಚರಿಸಿದರು ಎಂದರು.

ಕುರುಬ ಸಂಘದ ಅಧ್ಯಕ್ಷ ಎಂ.ವೇಮಣ್ಣ ಮಾತನಾಡಿ, ಕನಕದಾಸರು ಸರ್ವಜನಾಂಗದ ಹಿತ ಚಿಂತಕರಾಗಿದ್ದರು. ಅವರು ಕೀರ್ತನೆ ಮತ್ತು ಸಾಹಿತ್ಯದ ಮೂಲಕ ಬೌದ್ಧಿಕವಾಗಿ ಸಮಾಜಕ್ಕೆ ಸಾಹಿತ್ಯ ದೃಷ್ಟಿ ನೀಡಿದ ಮಹಾತ್ಮರು ಎಂದರು.

ಎಸ್ಸೆಸ್ಸೆೆಲ್ಸಿ ಮತ್ತು ಪಿಯುಸಿನಲ್ಲಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕುರುಬ ಸಂಘದ ಅಧ್ಯಕ್ಷರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ, ಮೆರವಣಿಗೆಗೆ ಮುನ್ನ ವೇದಿಕೆ ಕಾರ್ಯಕ್ರಮ ನಿಗದಿ ಮಾಡಿದ್ದಕ್ಕೆ ಕುರುಬ ಸಮಾಜದ ಮುಖಂಡರು ಸಮಾರಂಭಕ್ಕೆ ಬಾರದೆ ಮೆರವಣಿಗೆಗೆ ತೆರಳಿದರು. ಮುಖಂಡರು ತಹಸೀಲ್ದಾರ್​ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ತಹಸೀಲ್ದಾರ್​ ಜಿ.ಎನ್​.ಸುದೀಂಧ್ರ, ಬಿಇಒ ಮುನಿಲಕ್ಷ$್ಮಯ್ಯ, ಕೃಷಿ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್​, ತೋಟಗಾರಿಕೆ ಹಿರಿಯ ಅಧಿಕಾರಿ ಬೈರಾರೆಡ್ಡಿ, ತಾಪಂ ಇಒ ಶಿವಕುಮಾರಿ, ಆರ್​.ಸುಬ್ರಮಣಿ, ಮುರಳಿಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net