VIDEO| ತಾಳಿಕಟ್ಟುವ ಮುನ್ನ ವಧುವನ್ನು ಎಳೆದೊಯ್ದ ಪೊಲೀಸರು

InterFaith Marriage
Published on

ತಿರುವನಂತಪುರಂ: ನಾಟಕೀಯ ಬೆಳವಣಿಗೆಯೊಂದರಲ್ಲಿ ಅಂತರ್​ಧರ್ಮೀಯ ಜೋಡಿಯೊಮದು ವಿವಾಹವಾಗುವುದಕ್ಕು ಮುನ್ನ ಪೊಲೀಸರು ವಧುವನ್ನು ಎಳೆದೊಯ್ದುದಿರುವ ಘಟನೆ ತಿರುವನಂತಪುರದ ಕೋವಳಂ ದೇವಾಲಯದಲ್ಲಿ ನಡೆದಿದೆ.

ಘಟನೆ ಜೂನ್​ 18, ಭಾನುವಾರದಂದು ನಡೆದಿ್ದು, ಪರಸ್ಪರ ಪ್ರೀತಿಸುತ್ತಿದ್ದ ಆಲ್ಫಿಯಾ ಮತ್ತು ಅಖಿಲ್​ ಮದುವೆಯಾಗಲು ಕೋವಳಂ ದೇವಾಲಯಕ್ಕೆ ತೆರಳಿದ್ದರು. ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಪೊಲೀಸರು ಆಲ್ಫಿಯಾಳನ್ನು ವಶಕ್ಕೆ ಪಡೆದು ನ್ಯಾಯಾಲದಲ್ಲಿ ಹಾಜರುಪಡಿಸಿದ್ಧಾರೆ.

ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್​ ಅಧಿಕಾರಿಗಳು ಆಲ್ಫಿಯಾ ಕಾಣೆಯಾಗಿದ್ದರಿಂದ ಆಕೆಯ ಪೋಷಕರು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ನಾವು ಆಕೆಯನ್ನು ಕರೆದೊಯ್ದು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ಧಾರೆ.

ಇನ್ನು ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವರ ಅಖಿಲ್​ ಹಾಗು ವಧು ಆಲ್ಫಿಯಾ ಪೊಲೀಸರು ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಮಾಡಲಾಗಿದೆ. ಪೊಲೀಸರ ನಡುವಳಿಕೆ ಕುರಿತಾಗಿ ಹಿರಿಯ ಅಧಿಕಾರಿಗಳಿಗೆ ದೂರಿ ಕೊಡಲಾಗುವುದು ಎಂದು ಜೋಡಿಗಳಿಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net