

ಬೆಂಗಳೂರು: ಡಿಜಿಟಲ್ ಕ್ಷೇತ್ರದಲ್ಲಿ ಅತ್ಯಾಧುನಿಕತೆ ಬಂದಷ್ಟೂ ಅನುಕೂಲ ಹಾಗೂ ಅಪಾಯ ಎರಡೂ ಹೆಚ್ಚಳಗೊಳ್ಳುತ್ತದೆ. ಹೀಗಾಗಿ ಆಗಾಗ ಅಪ್ಡೇಟ್ ಆಗುವ ಮೂಲಕ ಸೂಕ್ತ ಸುರಕ್ಷಿತ ಕ್ರಮಕೈಗೊಳ್ಳುವ ಅಗತ್ಯ ಇರುತ್ತದೆ. ಆ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ವೆಬ್‌ಸೈಟ್ ವಿಳಾಸದಲ್ಲಿ ಬದಲಾವಣೆ ಆಗಿದೆ.
ರಾಜಧಾನಿ ಬೆಂಗಳೂರು ನಗರ ಪೊಲೀಸ್ ವೆಬ್‌ಸೈಟ್ ವಿಳಾಸದಲ್ಲಿ ಆಗಿರುವ ಬದಲಾವಣೆ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಂಬಂಧಿತ ಎಲ್ಲ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪೊಲೀಸ್ ಗಣಕ ವಿಭಾಗದ ಇ-ಮೇಲ್ ಸಂದೇಶದಲ್ಲಿ ತಿಳಿಸಿರುವಂತೆ ರಾಜ್ಯ ಪೊಲೀಸ್‌ನ ಎಲ್ಲಾ ಜಿಲ್ಲೆಗಳ ವೆಬ್‌ಸೈಟ್‌ಗಳ ಸುರಕ್ಷತಾ ದೃಷ್ಟಿಯಿಂದ ಇ-ಆಡಳಿತ ಕೇಂದ್ರದ ಜಾಲತಾಣ ವಿಭಾಗದವರು ಅಭಿವೃದ್ಧಿಪಡಿಸಿರುವ ಮಾನದಂಡಗಳನ್ನೊಳಗೊಂಡ ಹೊಸ ವೆಬ್‌ಸೈಟ್ ಸೃಜಿಸಲಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಇಲ್ಲಿಯವರೆಗೂ ಬೆಂಗಳೂರು ನಗರ ಪೊಲೀಸ್ ವೆಬ್‌ಸೈಟ್ ವಿಳಾಸ http://www.bcp.gov.in ಎಂದು ಉಪಯೋಗಿಸಲಾಗುತ್ತಿತ್ತು. ಇನ್ನು ಮುಂದೆ ಅದು http://www.bcp.karnataka.gov.in ಎಂದು ಇರಲಿದೆ.