ಆ್ಯಂಬುಲೆನ್ಸ್​ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಚೇಜ್​ ಮಾಡಿ ಹಿಡಿದ ಪೊಲೀಸರು; Video ವೈರಲ್​

video (1)
Published on

ಹೈದರಾಬಾದ್​: ಪೊಲೀಸರಿಂದ ತಪ್ಪಿಕೊಳ್ಳುವ ಕಳ್ಳನೊಬ್ಬ ಆ್ಯಂಬುಲೆನ್ಸ್​ ಕದ್ದು ಪರಾರಿಯಾಗು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ(Video) ವೈರಲ್ ಆಗಿದೆ.

​ಈ ಘಟನೆ ಹೈದರಾಬಾದ್​ನ ಹಯಾತ್​ನಗರದಲ್ಲಿ ಭಾನುವಾರ ನಡೆದಿದೆ. ಕೊನೆಗೂ ಆ್ಯಂಬುಲೆನ್ಸ್​ ಚೇಜ್​(ಬೆನ್ನಟ್ಟಿ) ಮಾಡಿದ ಪೊಲೀಸರು ಕಳ್ಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸುದ್ದಿ ಮತ್ತು ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ಸದ್ದು ಮಾಡುತ್ತೀವೆ.

ಘಟನೆಯ ಹಿನ್ನೆಲೆ.. ಪೊಲೀಸ್​ ಮಾಹಿತಿ ಪ್ರಕಾರ, ಆರೋಪಿ ಕಳ್ಳತನ ಇತಿಹಾಸ ಹೊಂದಿದ್ದಾನೆ. ಹೀಗಾಗಿ, ಅವನನ್ನು ಬಲೆಗೆ ಬೀಳಿಸಲು ಪೊಲೀಸರು ಪ್ರಯ್ನಿಸುತ್ತಿರುವಾಗ, ಎಚ್ಚೆತ್ತ ಕಳ್ಳ ಇವರಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲಿದ್ದ ಆ್ಯಂಬುಲೆನ್ಸ್​ ಬಳಸಿ ಹೈದರಾಬಾದ್​-ವಿಜಯವಾಡ ಹೆದ್ದಾರಿ ಕಡೆ ಹೊರಟಿದ್ದಾನೆ. ಅಲ್ಲದೆ, ಸೈರನ್​ ಬಳಸಿ ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದಾರೆ. ಇತನನ್ನು ಹಿಂಬಾಲಿಸಿದ ಪೊಲೀಸರ ಚೇಜ್ ಮಾಡಿದ್ದಾರೆ. ಇದು ವೈರಲ್​ ವಿಡಿಯೋಗಳಲ್ಲಿ ತೋರಿಸಿಲಾಗಿದೆ. ಅಲ್ಲದೇ, ರಸ್ತೆಯ ಚೇಜ್​ನಲ್ಲೇ ಮೂರು ಬಾರಿ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರೂ ಪರಾರಿಯಾಗುವ ದೃಶ್ತಗಳು ಕಾಣಸಿಗುತ್ತವೆ. ಕೊನೆಗೂ ಲಾರಿಗಳ ಸಹಾಯದಿಂದ ಆ್ಯಂಬುಲೆನ್ಸ್ಗೆ ಅಡ್ಡಗಟ್ಟಿ ಸೂರ್ಯಪೇಟ್​ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಚಿಟ್ಯಾಲ ಎಂಬ ಪ್ರದೇಶದ ಬಳಿ ಕಳ್ಳನನ್ನು ಹಿಡಿಯಲ್ಲಿ ಪ್ರಯತ್ನಿಸಿದ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಜಾನ್​ರೆಡ್ಡಿಗೆ ಆ್ಯಂಬುಲೆನ್ಸ್​ ವಾಹನ ತಗುಲಿದ ಪರಿಣಾಮ ಗಂಭೀರಗಾಯಗಳಾಗಿವೆ ಎನ್ನಲಾಗಿದೆ.(ಏಜೆನ್ಸಿಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net