ಬಸ್​ನಿಲ್ದಾಣದಲ್ಲಿ ವಾರಸ್ದಾರರಿಲ್ಲದ ನಾಲ್ಕು ಬ್ಯಾಗ್​ಗಳು ಪತ್ತೆ; ಪರಿಶೀಲನೆ ನಡೆಸುತ್ತಿರುವ ಪೊಲೀಸರು

KSRTC 22 Jan 20
Published on

ಚಿಕ್ಕಬಳ್ಳಾಪುರ: ಇಲ್ಲಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಾಲ್ಕು ಬ್ಯಾಗ್​ಗಳು ಪತ್ತೆಯಾಗಿದ್ದು ಅವುಗಳು ಯಾರಿಗೆ ಸೇರಿದ್ದು ಎಂದು ಗೊತ್ತಾಗಿಲ್ಲ.

ಬಸ್​ ಸ್ಟ್ಯಾಂಡ್​ನಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಕಲ್ಲು ಬೆಂಚಿನ ಕೆಳಗೆ ಬ್ಯಾಗ್​ಗಳು ದೊರೆತಿವೆ. ಒಂದೊಂದು ಬೆಂಚ್​ ಕೆಳಗೆ ಒಂದೊಂದು ಬ್ಯಾಗ್​ ಇದ್ದು ಅಲ್ಲಿದ್ದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಬಸ್ ನಿಲ್ದಾಣಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳವೂ ಆಗಮಿಸಿದೆ. ನಿಲ್ದಾಣಕ್ಕೆ ಬಸ್​ಗಳು ಬರುವುದನ್ನು ಸದ್ಯ ತಡೆಹಿಡಿಯಲಾಗಿದೆ. (ದಿಗ್ವಿಜಯನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net